March 26, 2026
Thursday, March 26, 2026
spot_img

ನಮೋಗೆ ಫಿದಾ ಆದ ಜನ | 5 ಸ್ಟಾರ್ ರೇಟಿಂಗ್: ಈ ವರ್ಷನೂ ಟಾಪ್ ನಲ್ಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಪ್ರಮುಖ ನಾಯಕರ ಜನಪ್ರಿಯತೆಯನ್ನು ಅಳೆಯುವ ಇತ್ತೀಚಿನ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನವನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್‌ನಲ್ಲಿ ಮೋದಿಯವರಿಗೆ ಶೇ. 68ರಷ್ಟು ಅನುಮೋದನೆ ದೊರೆತಿದೆ.

ಈ ವರದಿ 2026ರ ಮಾರ್ಚ್ ಮೊದಲ ವಾರದ ಮಾಹಿತಿಯನ್ನು ಆಧರಿಸಿದ್ದು, ಇತರ ಜಾಗತಿಕ ನಾಯಕರಿಗಿಂತ ಮೋದಿಯವರು ಮುಂಚೂಣಿಯಲ್ಲಿ ಮುಂದುವರೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶೇ. 39ರಷ್ಟು ಮಾತ್ರ ಬೆಂಬಲ ದೊರೆತಿದ್ದರೆ, ಬ್ರಿಟನ್ ಪ್ರಧಾನಿಯಾಗಿ ಇರುವ ಕೀರ್ ಸ್ಟಾರ್ಮರ್ ಅವರಿಗೆ ಶೇ. 24ರಷ್ಟು ರೇಟಿಂಗ್ ಲಭ್ಯವಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಅನುಮೋದನೆ ಶೇ. 17ರಷ್ಟಿದ್ದು, ಹೆಚ್ಚಿನ ಜನರು ಅವರ ಕಾರ್ಯಶೈಲಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕೊರಿಯಾದ ನಾಯಕ ಲೀ ಜೇ-ಮ್ಯುಂಗ್ ಶೇ. 62ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:

ಪ್ರಧಾನಿ ಮೋದಿ ಕಳೆದ ಕೆಲವು ವರ್ಷಗಳಿಂದ ಈ ಪಟ್ಟಿಯಲ್ಲಿ ನಿರಂತರವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 2025ರಲ್ಲಿ ಶೇ. 75 ಮತ್ತು 2024ರಲ್ಲಿ ಶೇ. 78ರಷ್ಟು ರೇಟಿಂಗ್ ಪಡೆದಿದ್ದ ಅವರು, 2021ರಿಂದಲೇ ಈ ಟ್ರ್ಯಾಕರ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಭಾರತದಲ್ಲಿ ಅವರ ಜನಪ್ರಿಯತೆ ಸ್ಥಿರವಾಗಿದ್ದು, ಅಸಮ್ಮತಿ ಪ್ರಮಾಣ ಕೇವಲ ಶೇ. 26ರಷ್ಟಿದೆ. ಮುಂಬರುವ ಜಾಗತಿಕ ಸಮ್ಮೇಳನಗಳಲ್ಲೂ ಈ ವಿಶ್ವಾಸ ಭಾರತಕ್ಕೆ ರಾಜತಾಂತ್ರಿಕವಾಗಿ ಬಲ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !