ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸೈಕೋ ಕಳ್ಳನೊಬ್ಬ ಪತ್ತೆಯಾಗಿದ್ದಾನೆ. ಈತ ಮಹಿಳೆಯರ ಇನ್ನರ್‌ವೇರ್ಸ್ ಕದಿಯುತ್ತಿದ್ದಾನೆ.
ಮೂರು ನಾಲ್ಕು ದಿನಗಳಿಂದ ಸಿಬಿಎಸ್ ಬಡಾವಣೆಯಲ್ಲಿ ಮಹಿಳೆಯರು ಒಣಗಿಹಾಕಿದ್ದ ಇನ್ನರ್‌ವೇರ್‌ಗಳು ಕಾಣೆಯಾಗಿದ್ದವು. ಮಹಿಳೆಯರು ಏಕಾಏಕಿ ಈ ರೀತಿ ಆಗುತ್ತಿರುವುದಕ್ಕೆ ಗಾಬರಿಯಾಗಿದ್ದರು.
ರಾತ್ರಿ ಮನೆಯ ಕಾಂಪೌಂಡ್ ಹಾರುವ ಈ ಕಳ್ಳ ಒಳ ಉಡುಪುಗಳನ್ನು ಮಾತ್ರ ಕದ್ದು ಓಡಿ ಹೋಗುತ್ತಿದ್ದಾನೆ. ಈತನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಕಾಣಿಸಿವೆ. ಈತನನ್ನು ಹುಡುಕಿ ಬಂಧಿಸಿ ಎಂದು ಮಹಿಳೆಯರು ಆಗ್ರಹಿಸಿದ್ದಾರೆ.



