September 5, 2026
Saturday, September 5, 2026
spot_img

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ: ಬಾಲಿವುಡ್ ಮಂದಿಗೆ ಮೇಕಿಂಗ್ ಕ್ಲಾಸ್ ತಗೊಂಡ RGV

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಅಕ್ಷರಶಃ ಸುನಾಮಿ ಸೃಷ್ಟಿಸಿದೆ. ಜಾಗತಿಕವಾಗಿ 1,300 ಕೋಟಿ ರೂಪಾಯಿ ಗಳಿಸಿ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದ್ದರೂ, ಬಾಲಿವುಡ್‌ನ ಘಟಾನುಘಟಿಗಳು ಮೌನವಾಗಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಮೌನದ ವಿರುದ್ಧ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಗುಡುಗಿದ್ದಾರೆ.

“ಆದಿತ್ಯ ಧರ್ ಇಂಡಸ್ಟ್ರಿಯ ಅಡಿಯಲ್ಲಿ ಪರಮಾಣು ಬಾಂಬ್ ಇಟ್ಟಿದ್ದಾರೆ, ಆದರೆ ಯಾರೂ ಚಕಾರ ಎತ್ತುತ್ತಿಲ್ಲ” ಎಂದು ವರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದ ಮೌನವನ್ನು ವ್ಯಂಗ್ಯವಾಡಿದ ಅವರು, “ಈ ಸಿನಿಮಾದ ಅದ್ಭುತ ಮೇಕಿಂಗ್ ನೋಡಿ ಬೇರೆಯವರಿಗೆ ಪಾರ್ಶ್ವವಾಯು ಪೀಡಿತರಾದಂತೆ ಆಗಿದೆ” ಎಂದು ಕುಟುಕಿದ್ದಾರೆ.

“ಇದು ಸಿನಿಮಾ ಮೇಕಿಂಗ್‌ನ ಹೊಸ ಪಾಠ. ಇದನ್ನು ಅಧ್ಯಯನ ಮಾಡದಿದ್ದರೆ 2026ರ ಮಾರ್ಚ್ 19ರ ನಂತರದ ಚಿತ್ರರಂಗದ ಸ್ಮಶಾನದಲ್ಲಿ ನೀವು ಹೂತುಹೋಗುತ್ತೀರಿ” ಎಂದು ಎಚ್ಚರಿಸಿದ್ದಾರೆ.

ರಾಜಮೌಳಿ, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಅವರಂತಹ ದಿಗ್ಗಜರು ಚಿತ್ರವನ್ನು ಹೊಗಳಿದ್ದರೂ, ಉಳಿದವರ ನಿಗೂಢ ಮೌನವು ಚಿತ್ರರಂಗದ ಒಳಗಿನ ಅಸೂಯೆಯನ್ನು ಎತ್ತಿ ತೋರಿಸುತ್ತಿದೆ ಎಂಬುದು ಆರ್‌.ಜಿ.ವಿ ವಾದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !