ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಕ್ರಿಕೆಟ್ ಹಬ್ಬ ಅದ್ಧೂರಿಯಾಗಿ ಆರಂಭವಾಗಿದ್ದು, ಈಗಾಗಲೇ ನಾಲ್ಕು ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಒಟ್ಟು 10 ತಂಡಗಳ ಪೈಕಿ 8 ತಂಡಗಳು ಅಂಗಳಕ್ಕಿಳಿದು ತಮ್ಮ ಶಕ್ತಿ ಪ್ರದರ್ಶಿಸಿವೆ. ಇಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ನಂತರ ಎಲ್ಲಾ ತಂಡಗಳು ತಮ್ಮ ಮೊದಲ ಸುತ್ತನ್ನು ಪೂರ್ಣಗೊಳಿಸಲಿವೆ.
ಈವರೆಗೆ ನಡೆದ ಪಂದ್ಯಗಳಲ್ಲಿ 4 ತಂಡಗಳು ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದಿದ್ದರೆ, ಇನ್ನುಳಿದ 4 ತಂಡಗಳು ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಉಂಡಿವೆ.
ಗೆಲುವಿನ ನಗೆ ಬೀರಿದ ತಂಡಗಳು: ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್.
ಸೋಲಿಗೆ ಶರಣಾದ ತಂಡಗಳು: ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್.
ಲೀಗ್ ಹಂತದಲ್ಲಿ ಕೇವಲ ಗೆಲುವು ಮಾತ್ರವಲ್ಲ, ಗೆಲುವಿನ ಅಂತರವೂ ಮುಖ್ಯ ಎಂಬುದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವೇ ಸಾಕ್ಷಿ. ಸದ್ಯ ಗೆದ್ದಿರುವ ನಾಲ್ಕೂ ತಂಡಗಳು ತಲಾ 2 ಅಂಕಗಳನ್ನು ಹೊಂದಿದ್ದರೂ, ನೆಟ್ ರನ್ ರೇಟ್ ಆಧಾರದ ಮೇಲೆ ಸ್ಥಾನಗಳು ಬದಲಾಗಿವೆ.




