April 5, 2026
Sunday, April 5, 2026
spot_img

ದಿನಭವಿಷ್ಯ: ಸಕಾರಾತ್ಮಕ ನಡವಳಿಕೆಯೇ ನಿಮಗೆ ಜಯ ತಂದುಕೊಡಲಿದೆ, ದ್ವೇಷ ಮರೆತು ಮುನ್ನಡೆಯಿರಿ

ಮೇಷ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ ಸಂಭವ. ಅದರಿಂದ ಹಿತವೇ ಆಗಲಿದೆ.  ಅನ್ಯರ ಜತೆಗಿನ ವೈರವನ್ನು ದೀರ್ಘ ಎಳೆಯಬೇಡಿ.                  
ವೃಷಭ
ಆದಾಯ ಗಳಿಕೆಯ ಹೊಸ ದಾರಿ ತೋರಲಿದೆ. ನಿಮ್ಮ ವ್ಯಕ್ತಿತ್ವ ಇತರರ ಮೆಚ್ಚುಗೆ ಗಳಿಸುವುದು. ವಿವಾಹಿತರ ಪಾಲಿಗೆ ಶುಭ ಬೆಳವಣಿಗೆ.            
ಮಿಥುನ
  ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಬೀಳಲಿದೆ. ಮಾನಸಿಕ ಒತ್ತಡದಿಂದ ನೆಮ್ಮದಿ ಹಾಳು. ಪ್ರೀತಿಯ ಬಿಕ್ಕಟ್ಟು ಶಮನವಾಗದೆ ಅಸಹನೆ. ಧನವ್ಯಯ.        
ಕಟಕ
ವೃತ್ತಿ ಕ್ಷೇತ್ರದಲ್ಲಿ ನಯವಂಚಕರ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಸಮಸ್ಯೆ ಉಂಟಾದೀತು. ಪ್ರೀತಿಯ ವ್ಯವಹಾರದಲ್ಲಿ ಬಿಕ್ಕಟ್ಟು.  
ಸಿಂಹ
ಭಾವುಕತೆ ನಿಮ್ಮ ವಿವೇಕ ಮರೆಸಬಹುದು. ಸಹೋದರರಿಂದ ಸಮಸ್ಯೆ ಸೃಷ್ಟಿ. ಆಪ್ತ ಸಂಬಂಧ ಕೆಡಲಿದೆ. ನೆರೆಕರೆ ಜತೆ ವೈಷಮ್ಯ ಸಂಭವ.
ಕನ್ಯಾ
ಒತ್ತಡದ ಬದುಕಿಂದ ವಿರಾಮ ಪಡೆಯಿರಿ. ಆ ಮೂಲಕ ಮಾನಸಿಕ ನೆಮ್ಮದಿ ಪಡಕೊಳ್ಳಿ. ಯುವಕರು ಪ್ರೇಮದ ತುಡಿತಕ್ಕೆ ಒಳಗಾಗುವಿರಿ.  
ತುಲಾ
ನಿಮ್ಮ ಗುಣಾತ್ಮಕ ನಡವಳಿಕೆಯಿಂದ ಯಶ. ಜತೆಗೇ ವೇದಾಂತದ ಭಾವ ಆವರಿಸಬಹುದು. ಎಲ್ಲದರಿಂದ ದೂರವಾಗಿ  ಬದುಕುವ ತುಡಿತ.      
ವೃಶ್ಚಿಕ
  ಕುಟುಂಬದ ಹಿತಕ್ಕೆ  ಹೆಚ್ಚು ಕಾಳಜಿ ವಹಿಸುವಿರಿ. ಉದ್ಯಮಿಗಳು ಇಂದು ಒಂದು ಹೆಜ್ಜೆ ಹಿಂದಿಡಿ. ದಿನದಂತ್ಯಕ್ಕೆ ವೈರಾಗ್ಯ ಭಾವ ಉಂಟಾದೀತು.      
ಧನು
  ವ್ಯಕ್ತಿಯೊಬ್ಬರ ಜತೆ ವಿಶ್ವಾಸಭರಿತ ಬಾಂಧವ್ಯ ಬೆಳೆಯಬಹುದು. ಆದಾಯದಲ್ಲಿ ಹೆಚ್ಚಳ. ಮನೆಯ ಸಮಸ್ಯೆ ಪರಿಹಾರ, ನೆಮ್ಮದಿ.  
ಮಕರ
 ಎಲ್ಲರ ಜತೆ ಮುಕ್ತವಾಗಿ ಬೆರೆಯಿರಿ. ಎಲ್ಲರನ್ನು ಸಂಶಯದಿಂದ ನೋಡಬೇಡಿ. ವಿಶ್ವಾಸ ಮುಖ್ಯ. ಆತ್ಮೀಯರ ಮನ ನೋಯಿಸಬೇಡಿ.    
ಕುಂಭ
 ನಿಮ್ಮ ಶ್ರಮದಿಂದ ಉದ್ಯೋಗದಲ್ಲಿ ಯಶ.     ಆರ್ಥಿಕ ಉನ್ನತಿ. ಪ್ರೀತಿಯ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಿ. ಅಪಸ್ವರ ಏಳದಂತೆ ನೋಡಿಕೊಳ್ಳಿ.          
ಮೀನ
ವೃತ್ತಿ ಒತ್ತಡದಿಂದ ಇಂದು ಮುಕ್ತಿ. ಆಪ್ತರ ಜತೆ ಬೆರೆಯುವ ಅವಕಾಶ. ಶ್ಲಾಘನೀಯ ನಿರ್ವಹಣೆ ತೋರುವಿರಿ. ಖಾಸಗಿ ಚಿಂತೆ ಪರಿಹಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !