April 8, 2026
Wednesday, April 8, 2026
spot_img

ವೈಭವ್ vs ಭುವಿ: ಕಳೆದ ಬಾರಿಯ ‘ಸೇಡು’ ತೀರಿಸಿಕೊಳ್ಳಲು ರೆಡಿಯಾದ ಯುವ ದಾಂಡಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗ ಎಲ್ಲಿ ನೋಡಿದರೂ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರದ್ದೇ ಮಾತು. ಇತ್ತೀಚೆಗೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದ ನಂಬರ್ 1 ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಈ ಯುವ ದಾಂಡಿಗ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ಮಳೆಬಾಧಿತ ಪಂದ್ಯದಲ್ಲಿ ಅಪ್ರತಿಮ ಸಾಹಸ ತೋರಿದ ವೈಭವ್, ಬುಮ್ರಾ ಅವರ 5 ಎಸೆತಗಳಲ್ಲಿ ಬರೋಬ್ಬರಿ 13 ರನ್ ಸಿಡಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ಅವರು 39 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.

ಏಪ್ರಿಲ್ 10 ರಂದು ಗುವಾಹಟಿಯ ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿರುವ ವೈಭವ್, ಐವರು ಪ್ರಮುಖ ಬೌಲರ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಭುವನೇಶ್ವರ್ ಕುಮಾರ್: ಕಳೆದ ಸೀಸನ್‌ನಲ್ಲಿ ವೈಭವ್ ವಿಕೆಟ್ ಪಡೆದಿದ್ದ ಭುವಿ ವಿರುದ್ಧ ಈ ಬಾರಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದ್ದಾರೆ.

ಕೃನಾಲ್ ಪಾಂಡ್ಯ: ಸ್ಪಿನ್ ಬಲೆ ದಾಟಿ ದೊಡ್ಡ ಹೊಡೆತಗಳನ್ನು ಬಾರಿಸಲು ವೈಭವ್ ನೆಟ್ಸ್‌ನಲ್ಲಿ ಕಠಿಣ ತಯಾರಿ ನಡೆಸುತ್ತಿದ್ದಾರೆ.

ಜೇಕಬ್ ಡಫಿ & ಅಭಿನಂದನ್ ಸಿಂಗ್: ಆರ್‌ಸಿಬಿಯ ಈ ವೇಗಿಗಳ ದಾಳಿಯನ್ನು ಧೂಳೀಪಟ ಮಾಡಲು ಯುವ ಆಟಗಾರ ಸಜ್ಜಾಗಿದ್ದಾರೆ.

ಸುಯಶ್ ಶರ್ಮಾ: ಗೂಗ್ಲಿ ಮಾಂತ್ರಿಕ ಸುಯಶ್ ಸ್ಪಿನ್ ತಂತ್ರಗಳನ್ನು ಮೆಟ್ಟಿ ನಿಲ್ಲಲು ವೈಭವ್ ವಿಶೇಷ ಅಭ್ಯಾಸ ನಡೆಸುತ್ತಿದ್ದಾರೆ.

ಬುಮ್ರಾ ಅವರನ್ನೇ ಬೆಚ್ಚಿಬೀಳಿಸಿದ ಈ 15ರ ಹರೆಯದ ವೈಭವ್ ಸೂರ್ಯವಂಶಿ, ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಎಸೆತಗಳನ್ನು ಹೇಗೆ ಎದುರಿಸಲಿದ್ದಾರೆ? ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಂಡು ಆರ್‌ಸಿಬಿ ವಿರುದ್ಧ ಮಿಂಚುತ್ತಾರಾ? ಎಂಬುದು ಈಗ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !