April 8, 2026
Wednesday, April 8, 2026
spot_img

ವ್ಯವಹಾರದಲ್ಲಿ ನೋ ‘ರಿಲೇಷನ್ ಶಿಪ್’: ಪತಿಯ ಸಿನಿಮಾ ಪ್ರಚಾರದಲ್ಲಿ ನಯನತಾರಾ ‘ನೋ ಫ್ರೀ’ ಪಾಲಿಸಿ!

ಸಿನಿಮಾ ರಂಗ ಅಂದಮೇಲೆ ಅಲ್ಲಿ ಪ್ರತಿಯೊಂದೂ ವ್ಯವಹಾರವೇ. ಇಲ್ಲಿ ಸ್ನೇಹ, ಪ್ರೀತಿಗಿಂತಲೂ ‘ಬ್ರ್ಯಾಂಡ್ ವ್ಯಾಲ್ಯೂ’ ಮುಖ್ಯವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಸಿನಿಮಾ ‘ಎಲ್‌ಐಕೆ’ (ಲವ್ ಇನ್ಶುರೆನ್ಸ್ ಕಂಪೆನಿ) ಪ್ರಚಾರಕ್ಕೆ ಬರಲು ಲಕ್ಷಾಂತರ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗೆ ನಡೆದ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಯನತಾರಾ ಗೈರುಹಾಜರಾಗಿದ್ದರು. ಈ ಬಗ್ಗೆ ಸ್ವತಃ ವಿಘ್ನೇಶ್ ಶಿವನ್ ಮಾತನಾಡುತ್ತಾ, “ನನ್ನ ಪತ್ನಿಯನ್ನೇ ಅತಿಥಿಯಾಗಿ ಕರೆಯುವಷ್ಟು ಹಣ ನಮ್ಮ ಬಳಿ ಇಲ್ಲ” ಎಂದು ತಮಾಷೆಯಾಗಿ ಹೇಳಿದರೂ, ಇದರ ಹಿಂದೆ ದೊಡ್ಡದೊಂದು ವೃತ್ತಿಪರ ಸತ್ಯ ಅಡಗಿದೆ ಎಂಬ ಚರ್ಚೆ ಶುರುವಾಗಿದೆ.

ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ “ಪತಿಯ ಸಿನಿಮಾವನ್ನೇ ಪ್ರಚಾರ ಮಾಡಲು ಹಣ ಬೇಕೆ?” ಎಂಬ ಟೀಕೆಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಸಿನಿಮಾ ಎನ್ನುವುದು ಒಂದು ಪಕ್ಕಾ ಬ್ಯುಸಿನೆಸ್, ಅಲ್ಲಿ ಭಾವನೆಗಳಿಗಿಂತ ವೃತ್ತಿಧರ್ಮ ಮುಖ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ನಯನತಾರಾ ಅವರ ಈ ನಡೆ ‘ಪರ್ಸನಲ್ ಲೈಫ್’ ಮತ್ತು ‘ಪ್ರೊಫೆಷನಲ್ ಲೈಫ್’ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !