April 12, 2026
Sunday, April 12, 2026
spot_img

ದಿನಭವಿಷ್ಯ: ಹದಗೆಟ್ಟಿದ್ದ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ, ಒತ್ತಡ ಮುಕ್ತ ದಿನ

ಮೇಷ
ನಿರ್ಧಾರ ಸೂಕ್ತ ಫಲ ನೀಡಲಿದೆ. ಹಿರಿಯರ ಜತೆ ವಾಗ್ವಾದ ತಪ್ಪಿಸಿ. ದಿನದ ಅಂತ್ಯಕ್ಕೆ ವಿಶ್ರಾಂತಿಯ ಅಗತ್ಯ ಬೀಳಬಹುದು. ಮಕ್ಕಳ ಸಾಧನೆ ತೃಪ್ತಿಕರ.
ವೃಷಭ
ನಿಮ್ಮ ಸುತ್ತಲಿನ ಜನರ ಜತೆ ಗೊಂದಲಕ್ಕೆ ಆಸ್ಪದವಾಗದಂತೆ ವರ್ತಿಸಿರಿ. ಆರ್ಥಿಕ ಗುರಿ ಸಾಧನೆ. ಇನ್ನಿತರ ಕಾರ್ಯದಲ್ಲಿ ಸ-ಲತೆ.
ಮಿಥುನ
ದಂಪತಿ ಮಧ್ಯೆ ತಪ್ಪಭಿಪ್ರಾಯ ಸಂಭವ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಉದ್ಯಮದಲ್ಲಿ ಹೂಡಿದ ಹಣ ಲಾಭ ತರಲಿದೆ.
ಕಟಕ
ಧಾರ್ಮಿಕ ಕಾರ್ಯ ದಲ್ಲಿ ಹೆಚ್ಚು ತೊಡಗುವಿರಿ. ಸಮಸ್ಯೆಯಿಂದ ಬೆಂದ ಮನಸ್ಸಿಗೆ ಸಮಾಧಾನ. ಆತ್ಮೀಯರ ಜತೆಗಿನ ಸಂಬಂಧ ಸುಧಾರಣೆ.
ಸಿಂಹ
ಹದಗೆಟ್ಟಿದ್ದ ಸಂಬಂಧ ಸುಧಾರಿಸಲಿದೆ. ನೀವೂ ಹೊಂದಿಕೊಂಡು ನಡೆಯಿರಿ. ತಾಳ್ಮೆ ಕಳಕೊಂಡರೆ ಆರೋಗ್ಯ ಹದಗೆಡಬಹುದು.
ಕನ್ಯಾ
ಮನೆಯ ವ್ಯವಹಾರ ಹೆಚ್ಚು ಸಮಯ ಕೋರುವುದು. ಇತರ ವಿಷಯಗಳಿಗೆ ಸಮಯ ಸಾಲದು. ವೃತ್ತಿ ಒತ್ತಡ ಇಂದು ಕಡಿಮೆ.
ತುಲಾ
ನಿಮ್ಮ ಸಜ್ಜನಿಕೆ ಎಲ್ಲರ ಮೆಚ್ಚುಗೆಗೆ ಪಾತ್ರ. ಸಮಾನ ಮನಸ್ಕ ವ್ಯಕ್ತಿಗಳ ಜತೆ ಸಂವಾದದಿಂದ ನೆಮ್ಮದಿ. ಸಾಮಾಜಿಕ ಕಾರ್ಯದ ಹೊಣೆ ಬೀಳಲಿದೆ.
ವೃಶ್ಚಿಕ
ಅನಿರೀಕ್ಷಿತ ಧನಲಾಭ. ಸಣ್ಣಪುಟ್ಟ ಅವಘಡ ಆಗದಂತೆ ಎಚ್ಚರ ವಹಿಸಿ. ಕೆಲಸವನ್ನು ಬಾಕಿ ಇಡಬೇಡಿ. ಬಳಿಕ ಹೆಚ್ಚು ಒತ್ತಡ ಅನುಭವಿಸುವಿರಿ.
ಧನು
ಸೌಹಾರ್ದಕರ ಮನೆಯ ವಾತಾವರಣ. ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ದುಬಾರಿ ವಸ್ತು ಖರೀದಿ ಅಸಂತೃಪ್ತಿ ತರಬಹುದು.
ಮಕರ
ಇತರರ ಕೆಲಸದ ಬಗ್ಗೆ ಅತಿಯಾದ ಟೀಕೆ ಮಾಡಬೇಡಿ. ನಿಮ್ಮ ಕೆಲಸದ -ಲಿತಾಂಶದ ಬಗ್ಗೆ ಅಂಜಿಕೆಯೂ ಬೇಡ. ಸಮಾಧಾನದಿಂದಿರಿ.
ಕುಂಭ
ಹೊಂದಾಣಿಕೆ ಇಲ್ಲದ ನಿಮ್ಮ ಮನಸ್ಥಿತಿಯಿಂದ ಪ್ರತಿಕೂಲ ಪರಿಸ್ಥಿತಿ ಸೃಷ್ಟಿಯಾದೀತು. ಇತರರ ಮಾತು ಕೇಳುವ ವ್ಯವದಾನ ಪ್ರದರ್ಶಿಸಿ.
ಮೀನ
ಮನಸ್ಸಿನ ಒತ್ತಡ ಇಂದು ನಿವಾರಣೆ. ಆತಂಕಗೊಂಡಿದ್ದ ವಿಚಾರ ಸಮಾಧಾನಕರ ಇತ್ಯರ್ಥ. ಹೆಚ್ಚುತ್ತಿರುವ ಖರ್ಚು ನಿಯಂತ್ರಣ ಅವಶ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !