Monday, September 1, 2025

ಬ್ಯೂಟಿಶಿಯನ್ ಮೇಲೆ ಖಾರದಪುಡಿ ಎರಚಿ ದರೋಡೆಗೆ ಯತ್ನ, ಮಹಿಳೆ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ಯೂಟಿಷಿಯನ್ ಮೇಲೆ ಖಾರದ ಪುಡಿ ಎರಚಿ ದರೋಡಗೆ ಯತ್ನ ನಡೆಸಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಚನ್ನಪಟ್ಟಣ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಕೃತಿಕಾ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಚನ್ನಪಟ್ಟಣ ಪಟ್ಟಣದ ನಿವಾಸಿ ಸರಿತಾ (44) ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಸಭಿಹಾ ಬಾನು (30) ಎಂಬ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ಮಹಿಳೆ ಕೂಡ ಚನ್ನಪಟ್ಟಣ ಪಟ್ಟಣದ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 12.30 ರ ಸುಮಾರಿಗೆ ಪಾರ್ಲರ್‌ಗೆ ಬಂದ ಆರೋಪಿತ ಮಹಿಳೆ, ತಾನು ಯಾರಿಗೋ ಕಾಯುತ್ತಿದ್ದೇನೆ ಎಂದು ಹೇಳಿ ಆಕೆ ತನ್ನ ಸರದಿಯನ್ನು ವಿಳಂಬ ಮಾಡುತ್ತಲೇ ಇದ್ದಳು. ಸುಮಾರು ಎರಡು ಗಂಟೆಗಳ ನಂತರ ಸರಿತಾ ಒಬ್ಬಂಟಿಯಾಗಿರುವುದನ್ನು ಗಮನಿಸಿ, ಮುಖದ ಮೇಲೆ ಖಾರದ ಪುಡಿ ಎರಚುವ ಮೂಲಕ ಹಲ್ಲೆ ನಡೆಸಿದ್ದಾಳೆ. ಬಳಿಕ ಮಂಗಳ ಸೂಕ್ತ ಕಸಿದು ಪರಾರಿಯಾಗಲು ಯತ್ನಿಸಿದ್ದಾಳೆ.

ಇದನ್ನೂ ಓದಿ