April 14, 2026
Tuesday, April 14, 2026
spot_img

ದಿನಭವಿಷ್ಯ: ದೇಹಾರೋಗ್ಯ ಕಾಪಾಡುವ ಕಡೆ ನಿಮ್ಮೆಲ್ಲ ಗಮನ ಇರಲಿ

ಮೇಷ.
ಕಚೇರಿಯಲ್ಲಿ ಹೆಚ್ಚು ಹೊಣೆ. ಇಂದಿನ ಬೆಳವಣಿಗೆ ಒತ್ತಡ ಹೆಚ್ಚಿಸಲಿದೆ. ಆತ್ಮೀಯರ ಜತೆ ಒಡನಾಟದಿಂದ ತುಸು ನೆಮ್ಮದಿ.
       
ವೃಷಭ
ಗಮನವಿಟ್ಟು ಕೆಲಸ ಮಾಡಿದರೆ ಮಾತ್ರ ಗುರಿ ಸಾಧಿಸಬಹುದು. ಇದನ್ನು ಅರಿಯಿರಿ. ಬೇಕಾಬಿಟ್ಟಿ ಧೋರಣೆ ತ್ಯಜಿಸಿ. ಕೆಲ ಅಭ್ಯಾಸ ಬಿಟ್ಟುಬಿಡಿ.
       
ಮಿಥುನ
ದೇಹಾರೋಗ್ಯ ಕಾಪಾಡಲು ಅದ್ಯತೆ ಕೊಡಿ. ದಂಪತಿ ಮಧ್ಯೆ ವಾಗ್ವಾದ ಸಂಭವ. ಒಬ್ಬರು ಮೌನ ತಾಳುವುದು ಉತ್ತಮ. ಆರ್ಥಿಕ ಒತ್ತಡ.

ಕಟಕ
ನಿಮ್ಮ ಸುತ್ತಲಿನ ಪರಿಸ್ಥಿತಿ, ವ್ಯಕ್ತಿಗಳ ಜತೆ ಹೊಂದಿಕೊಳ್ಳಲು ಕಷ್ಟ ಪಡುವಿರಿ. ಮನೆಯವರ ಮಾತನ್ನು ವಿರೋಧಿಸಲು ಹೋಗಬೇಡಿ.      

ಸಿಂಹ
ಬದಲಾವಣೆಗೆ ಅಂಜಬೇಡಿ. ಅದುವೇ ನಿಮ್ಮ ಪ್ರಗತಿಗೆ ದಾರಿ. ಸುಮ್ಮನೇ ಕೂರುವುದು ಫಲ ನೀಡದು. ಮನೆ ಮಂದಿಯ ಸಹಕಾರ.  

ಕನ್ಯಾ
ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಬಯಸಿದ ಕಾರ್ಯ ಸಂಪನ್ನ. ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ.                

ತುಲಾ
ಆತ್ಮೀಯರಿಂದ ಅಚ್ಚರಿಯ ಕೊಡುಗೆ. ಆರ್ಥಿಕವಾಗಿ ತುಸು ಹಿನ್ನಡೆ. ಒತ್ತಡದ ಕಾರ್ಯದಿಂದ ದೂರವಿರಿ. ಆರೋಗ್ಯ ಸುಸ್ಥಿರ.      

ವೃಶ್ಚಿಕ
ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ವಿವಾಹ ಭಾಗ್ಯ ಕೂಡಿಬರಬಹುದು. ಆರ್ಥಿಕವಾಗಿ ಹಿನ್ನಡೆ ಕಾಣುವಿರಿ.          

ಧನು
ಆಹಾರ ಸೇವನೆ ಹಿತಮಿತವಾಗಿರಲಿ. ಆರೋಗ್ಯಕ್ಕೆ ಅದು ಅವಶ್ಯ.  ಮನೆಯ ಬಿಕ್ಕಟ್ಟು ಬೇಗ ಪರಿಹಾರ ಕಾಣಲಿದೆ. ಹಠದ ಧೋರಣೆ ಬಿಡಿ.

ಮಕರ
ವೃತ್ತಿ ಒತ್ತಡವು ಮನಶ್ಯಾಂತಿ ಕೆಡಿಸೀತು. ಧ್ಯಾನ ಸಹಕಾರಿ. ಹೊಸ ವ್ಯವಹಾರದಲ್ಲಿ ಈಗಲೇ ಹೂಡಿಕೆ ಮಾಡದಿರಿ. ಸ್ವಲ್ಪ ಕಾಲ ಕಾದುನೋಡಿ.

ಕುಂಭ
 ಬಾಕಿ ಇರುವ ಕಾರ್ಯ ಪೂರೈಸಲು ಇಂದು ಗಮನ ಕೊಡಿ. ಆದಾಯ ಹೆಚ್ಚಳದ ಸಂಕೇತ. ಆಪ್ತರ ಜತೆ ವಾಗ್ವಾದ ನಡೆದೀತು.        
 
ಮೀನ
ಮನೆಯವರ ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣವಾದೀತು. ಕೆಲವು ವಿಚಾರದಲ್ಲಿ ಅತಿ  ಭಾವುಕತೆ ತೋರುವಿರಿ. ದೃಢ ಮನಸ್ಸಿರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !