ಬೇಸಿಗೆಯ ಬಿಸಿಲಿನಲ್ಲಿ ಏನಾದರೂ ತಂಪಾದದ್ದು ತಿನ್ನಬೇಕು ಅನ್ನಿಸೋದೇ ಸಾಮಾನ್ಯ. ಅದರಲ್ಲೂ ಮಾವಿನ ಹಣ್ಣಿನ ಸೀಸನ್ ಬಂದಾಗ ಮ್ಯಾಂಗೋ ಡೆಸರ್ಟ್ಗಳಿಗೆ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಕೂಲ್ ಕೂಲ್ ಮ್ಯಾಂಗೋ ಕುಲ್ಫಿ ಮನೆಯಲ್ಲೇ ತುಂಬಾ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಪೂರ್ಣ ಕೆನೆ ಹಾಲು – 1 ಲೀಟರ್
ಮಾವಿನ ಹಣ್ಣಿನ ತಿರುಳು – 1 ಕಪ್
ಕಂಡೆನ್ಸ್ಡ್ ಮಿಲ್ಕ್ – ½ ಕಪ್
ಏಲಕ್ಕಿ ಪುಡಿ – ¼ ಟೀ ಚಮಚ
ಪಿಸ್ತಾ / ಬಾದಾಮಿ – ಸ್ವಲ್ಪ
ಮಾಡುವ ವಿಧಾನ
ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ಸಣ್ಣ ಉರಿಯಲ್ಲಿ ಹಾಲು ಅರ್ಧದಷ್ಟು ಆಗುವವರೆಗೆ ಕುದಿಸಿ.
ನಂತರ ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಅಥವಾ ಸಕ್ಕರೆ ಸೇರಿಸಿ ಚೆನ್ನಾಗಿ ಕಲೆಸಿ. ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ತಾಜಾ ಮಾವಿನ ಹಣ್ಣಿನ ತಿರುಳು ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಕುಲ್ಫಿ ಅಚ್ಚುಗಳಲ್ಲಿ ಸುರಿದು ಫ್ರೀಜರ್ನಲ್ಲಿ ಕನಿಷ್ಠ 8 ಗಂಟೆಗಳ ಕಾಲ ಇಡಿ.
ಗಟ್ಟಿಯಾದ ನಂತರ ಅಚ್ಚಿನಿಂದ ತೆಗೆದು ಪಿಸ್ತಾ ಅಥವಾ ಬಾದಾಮಿಯಿಂದ ಅಲಂಕರಿಸಿ ಸರ್ವ್ ಮಾಡಿ.
ಬೇಸಿಗೆ ಬಿಸಿಲಿಗೆ ಇದಕ್ಕಿಂತ ಕೂಲ್ ಟ್ರೀಟ್ ಬೇರೆ ಇಲ್ಲ!



