April 15, 2026
Wednesday, April 15, 2026
spot_img

ನೋಟೀಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಆರೋಪ: ಪುನೀತ್ ಕೆರೆಹಳ್ಳಿ ಬಂಧನ

ಹೊಸದಿಗಂತ ಬೆಳ್ತಂಗಡಿ:

ಪೊಲೀಸ್ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಬೆಳ್ತಂಗಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಪುನೀತ್ ಅವರಿಗೆ ಸತತ ಮೂರು ಬಾರಿ ನೋಟಿಸ್ ನೀಡಿದ್ದರು. ಆದರೆ, ಪೊಲೀಸರ ನೋಟಿಸ್‌ಗೆ ಯಾವುದೇ ಮನ್ನಣೆ ನೀಡದೆ ವಿಚಾರಣೆಯಿಂದ ಪುನೀತ್ ದೂರ ಉಳಿದಿದ್ದರು ಎನ್ನಲಾಗಿದೆ.

ವಿಚಾರಣೆಗೆ ಹಾಜರಾಗದ ಕಾರಣ, ಪೊಲೀಸರು ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಪಡೆದು ಈ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ಅವರನ್ನು ವಶಕ್ಕೆ ಪಡೆದಿರುವ ತಂಡವು ಇಂದು ಅವರನ್ನು ಬೆಳ್ತಂಗಡಿಗೆ ಕರೆತರುತ್ತಿದೆ.

ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !