ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ವಿನಯ್ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ನಿನ್ನೆ ರಾತ್ರಿ ಜೈಲಿನೊಳಕ್ಕೆ ವಿನಯ್ ಕಾಲಿಟ್ಟಂತೆಯೇ ಗಳಗಳನೆ ಅತ್ತಿದ್ದಾರೆ. ಇಡೀ ರಾತ್ರಿ ನಿದ್ದೆ ಇಲ್ಲದೆ ಪರದಾಡಿದ್ದಾರೆ. ಈ ಹೊತ್ತಿನವರೆಗೂ ಹೊಟ್ಟೆಗೆ ಒಂದು ತುತ್ತು ಅನ್ನವನ್ನೂ ತಿಂದಿಲ್ಲವಂತೆ.
ಇಂದು ಹತ್ತು ಗಂಟೆ ಒಳಗೆ ಎಲ್ಲರಿಗೂ ಸಿಟಿಪಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಸೆಲ್‌ನಲ್ಲಿರಿಸಿದ್ದಾರೆ. ಎಲ್ಲಾ ಅಪರಾಧಿಗಳನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸಿಬಿಐ ಭದ್ರತೆಯಲ್ಲಿ ಕೋರ್ಟ್‌ಗೆ ಬರಲಿದ್ದಾರೆ.
ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ವಿನಯ್ ಕುಲಕರ್ಣಿಗೆ ಶಿಕ್ಷೆಯ ಅವಧಿ ಪ್ರಕಟವಾಗಲಿದೆ.



