August 25, 2026
Tuesday, August 25, 2026
spot_img

SHOCKING | ಚಿಕನ್‌ ಪ್ರಿಯರೇ ಎಚ್ಚರ! ರಾಜ್ಯಕ್ಕೂ ಕಾಲಿಟ್ಟಿದೆ ಹಕ್ಕಿಜ್ವರ, ಪೌಲ್ಟ್ರಿ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕನ್‌ ಪ್ರಿಯರಿಗೆ ಶಾಕ್‌ ಎದುರಾಗಿದ್ದು, ರಾಜ್ಯದಲ್ಲಿ ಹಕ್ಕಿಜ್ವರ ಕಾಲಿಟ್ಟಿದೆ. ಬೆಂಗಳೂರಿನ ಪೌಲ್ಟ್ರಿ ಫಾರ್ಮ್‌ನ ಕೋಳಿಗಳಲ್ಲಿ ಜ್ವರ ದೃಢಪಟ್ಟಿದ್ದು, ಪೌಲ್ಟ್ರಿ ಬಂದ್‌ ಆಗಿದೆ.

ಕೇಂದ್ರ ಸರ್ಕಾದ ಅನುಮತಿ ಮೇರೆಗೆ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ನಡೆಸಲಾಗಿದ್ದು, ಮೊದಲ ತಪಾಸಣೆಯಲ್ಲೆ ಎಚ್5ಎನ್1 ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿರುವ ಕೋಳಿಗಳನ್ನ ಗುಂಡಿ ತೆಗೆದು ಮುಚ್ಚಲಾಗಿದೆ.

ಈ ಪೌಲ್ಟ್ರಿಯಿಂದ ರಾಜ್ಯದ ನಾನಾ ಕಡೆಗಳಿಗೆ ಕೋಳಿಗಳನ್ನು ಕಳುಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೂ ನೋಟಿಸ್ ನೀಡಿದ್ದು, ಕೋಳಿ ಸಾಕಾಣೆ ಶೆಡ್, ಕೋಳಿ ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಕೋಳಿ ಸಾಕಾಣೆಗಾರರನ್ನ ಕ್ವಾರಂಟೈನ್ ಮಾಡಿದ್ದಾರೆ.

ರಾಜ್ಯ ಸರ್ಕಾರ ಪಶು ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಬಿಸಿಲ ತಾಪದಲ್ಲಿ ಬಂದಿರುವ ಹಕ್ಕಿ ಜ್ವರ ಬಂದಿದ್ದು, ಸುತ್ತಮುತ್ತ ಇರುವ ಕೋಳಿ ಶೆಡ್ ತಪಾಸಣೆ ನಡೆಸುವಂತೆ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !