ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಟಿಯಾಂಜಿನ್ ಸ್ಥಳಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ವಾಹನದಲ್ಲಿ ಇಬ್ಬರು ಒಟ್ಟಿಗೆ ಕುಳಿತಿರುವ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಹ್ಯಾಂಡಲ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, ಅಧ್ಯಕ್ಷ ಪುಟಿನ್ ಮತ್ತು ನಾನು ಒಟ್ಟಿಗೆ ದ್ವಿಪಕ್ಷೀಯ ಸಭೆ ನಡೆಯುತ್ತಿರುವ ಸ್ಥಳಕ್ಕೆ ಹೋಗುತ್ತಿದ್ದೇವೆ. ಅವರ ಜೊತೆಗಿನ ಮಾತುಕತೆ ಸದಾ ಒಳದೃಷ್ಟಿ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಅವರಿಬ್ಬರೂ ತಮ್ಮ ಪ್ರಯಾಣದ ಬಳಿಕ ಕಾರಿನಲ್ಲಿ 45 ನಿಮಿಷ ಮಾತುಕತೆ ನಡೆಸಿದರು. ಇದು ದ್ವಿಪಕ್ಷೀಯ ಮಾತುಕತೆಗೆ ಮುಂಚಿತವಾಗಿ ಗಟ್ಟಿಯಾದ ಭಾರತ-ರಷ್ಯಾ ಸಂಬಂಧವನ್ನು ಎತ್ತಿ ತೋರಿಸಿದವು. ರಷ್ಯಾದೊಂದಿಗಿನ ಭಾರತದ ತೈಲ ವ್ಯಾಪಾರವನ್ನು ಅಮೆರಿಕ ಸಾರ್ವಜನಿಕವಾಗಿ ಖಂಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವಿನ ಈ ಮಾತುಕತೆ ಮಹತ್ವದ್ದಾಗಿದೆ.
ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಪುಟಿನ್ ಹಾಗೂ ಮೋದಿಯ ಕಾರು ಪ್ರಯಾಣದ ಫೋಟೋ ಭಾರೀ ವೈರಲ್ ಆಗಿದೆ. ಈ ಫೋಟೋ ಅತಿ ಹೆಚ್ಚು ಸರ್ಚ್ ಆಗುವ ಮೂಲಕ ಟ್ರೆಂಡಿಂಗ್ನಲ್ಲಿದೆ.