April 21, 2026
Tuesday, April 21, 2026
spot_img

ಚಿರತೆಯಿಂದ ತನ್ನ ಅತ್ತೆಯನ್ನು ಕಾಪಾಡಿದ ಬಹದ್ದೂರ್‌ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರರಿನ ಸಿದ್ಧಾರ್ಥನಗರದಲ್ಲಿ ಅತ್ತೆಯನ್ನು ಚಿರತೆ ದಾಳಿಯಿಂದ ರಕ್ಷಿಸಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕೊಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ಮನೆಯ ಮಂಚದಡಿ ಮಲಗಿದ್ದ ಚಿರತೆಯಿಂದ ಮಂಚದ ಮೇಲೆ ಮಲಗಿದ್ದ ವೃದ್ಧ ಅತ್ತೆ ಸುಜಾತಾರನ್ನು ಸೊಸೆ ಪವಿತ್ರಾ ಕಾಪಾಡಿದ್ದರು. ಚಿರತೆಯಿದ್ದರೂ ಅತ್ತೆಯನ್ನು ಮನೆಯಿಂದ ಹೊರಕ್ಕೆ ಎತ್ತಿಕೊಂಡು ಬಂದಿದ್ದರು. ಇವರ ಸಾಹಸ, ಸಾಧನೆ, ಪ್ರೀತಿಗೆ ಮನಸೋತಿದ್ದೇನೆ. ಇವರ ಧೈರ್ಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಲಗಿದ್ದ ಅತ್ತೆ ಸುಜಾತಾರನ್ನು ಮಗುವಂತೆ ಎತ್ತಿಕೊಂಡು ಹೊರಕ್ಕೆ ಬಂದಿರುವ ಪವಿತ್ರಾ ಧೈರ್ಯಕ್ಕೆ ಸಾಟಿಯೇ ಇಲ್ಲ. ಆ ಕ್ಷಣದಲ್ಲಿ ಚಿರತೆ ಅಟ್ಯಾಕ್‌ನಿಂದ ಏನು ಬೇಕಾದರೂ ಆಗುವ ಸಾಧ್ಯತೆ ಇತ್ತು. ಆದರೆ ಅವರ ಧೈರ್ಯಕ್ಕೆ ಭಗವಂತನೂ ಸಾಥ್‌ ನೀಡಿದ್ದು, ಇಬ್ಬರು ಸುರಕ್ಷಿತವಾಗಿದ್ದಾರೆ. ಅತ್ತೆ ಸೊಸೆ ಎಂದರೆ ಬರೀ ಜಗಳ, ಅಸೂಯೆ ಎನ್ನುವ ಹಳೆ ಕಲ್ಪನೆಗಳನ್ನು ಈ ಅತ್ತೆ ಸೊಸೆ ತೆಗೆದುಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !