April 22, 2026
Wednesday, April 22, 2026
spot_img

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ, ಸಿಡಿಲಿನ ಅಬ್ಬರಕ್ಕೆ ವೃದ್ಧೆ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲಿನ ಆಘಾತಕ್ಕೆ ಜನ ಹೈರಾಣಾಗಿದ್ದಾರೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅತಿಯಾದ ಬಿರುಗಾಳಿ, ಸಿಡಿಲು ಸಹಿತ ಮಳೆಯಾಗಿದ್ದು, ಅನಾಹುತಗಳು ಸೃಷ್ಟಿಯಾಗಿವೆ.

ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಸಿಡಿಲಿನ ಬಡಿತಕ್ಕೆ ವೃದ್ಧೆಯೊಬ್ಬರು ಪ್ರಾಣಬಿಟ್ಟಿದ್ದಾರೆ. ವೃದ್ಧೆ ನೀಲಮ್ಮೆ ಮೃತರು. ಜೋರು ಮಳೆಯಿಂದಾಗಿ ರಕ್ಷಣೆ ಪಡೆಯೋದಕ್ಕೆ ನೀಲಮ್ಮ ಮರದ ಕೆಳಗಡೆ ನಿಂತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಆಲಿಕಲ್ಲು ಸಹಿತ ಮಳೆ ಬಂದ ಕಾರಣ ಜಿಲ್ಲೆಯ ಹಲವು ಮನೆಗಳಿಗೆ ಸಮಸ್ಯೆಯಾಗಿದೆ. ಅಂಗಡಿಗಳ ಶೀಟ್‌ ಹಾರಿಹೋಗಿದ್ದು, ಮರಗಳು ಬಿದ್ದು ಕಾರುಗಳಿ ಜಖಂ ಆದ ಘಟನೆ ಅರಕಲುಗೂಡಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ.

ಇನ್ನು ಕಾಫಿನಾಡು ಚಿಕ್ಕಮಗಳೂರು ಇದೀಗ ಮಲೆನಾಡಂತಾಗಿದೆ. ಇಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ. ಗಾಳಿಗುಂಡಿಯಲ್ಲಿ ಬೃಹತ್‌ ಮರವೊಂದು ಉರುಳಿ ಬಿದ್ದಿದ್ದು, ಐದು ಮನೆಗಳ ಛಾವಣಿ ಪುಡಿಪುಡಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !