April 21, 2026
Tuesday, April 21, 2026
spot_img

ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್‌ ಬೇಡ, ಮಾರ್ಕ್ಸೇ ಇರಲಿ: ಹೈಕೋರ್ಟ್‌ ಅಂತಿಮ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯ ಸೇರಿ ಥರ್ಡ್‌ ಲಾಂಗ್ವೇಜ್‌ ವಿಷಯಗಳಿಗೆ ಗ್ರೇಡ್‌ ಬೇಡ. ಮಾರ್ಕ್ಸ್‌ ನೀಡಿ ಎಂದು ಹೈಕೋರ್ಟ್‌ ಅಂತಿಮ ತೀರ್ಮಾನ ನೀಡಿದೆ.

ಈಗಾಗಲೇ ಗ್ರೇಡ್ಸ್‌ ಬೇಡ ಮಾರ್ಕ್ಸ್‌ ಇರಲಿ ಎಂದು ಹೈಕೋರ್ಟ್‌ ಒಮ್ಮೆ ಸೂಚನೆ ನೀಡಿತ್ತು, ಅದಾಗ್ಯೂ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜು ಸಲ್ಲಿತ್ತು. ಇದೀಗ ಮತ್ತೆ ಹೈಕೋರ್ಟ್‌ ಅಂಕಗಳಿಗೆ ಮಣೆ ಹಾಕಿದೆ.

ಇತರೆ ವಿಷಯಗಳಿಗೆ ಹೇಗೆ ಅಂಕ ನೀಡುತ್ತೀರೋ ಅದೇ ರೀತಿ ಥರ್ಡ್‌ ಲಾಂಗ್ವೇಜ್‌ಗೂ ಅಂಕ ನೀಡಬೇಕು ಎಂದಿದೆ. ಹೈಕೋರ್ಟ್ ಮರುಪರಿಶೀಲನೆ ಅರ್ಜಿಯನ್ನು ವಜಾಗೊಳಿಸಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನು ನೀಡಿ ಎಂದು ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !