June 18, 2026
Thursday, June 18, 2026
spot_img

ಸೆಲ್ಫಿ ಬೇಕಾದ್ರೆ 100 ಕೊಡ್ಬೇಕು..! ಪುಟಾಣಿಗಳ ಜೊತೆ ಮಸ್ತಿ ಮಾಡಿದ ವೈಭವ್ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಇದೀಗ ಮೈದಾನದ ಹೊರಗೂ ತಮ್ಮ ಹಾಸ್ಯಭರಿತ ನಡೆ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪುಟಾಣಿ ಅಭಿಮಾನಿಗಳ ಜೊತೆ ಅವರು ನಡೆಸಿದ ತಮಾಷೆಯ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೈಭವ್ ಅವರನ್ನು ನೋಡಿದ ಇಬ್ಬರು ಮಕ್ಕಳು ಸೆಲ್ಫಿಗಾಗಿ ಮುಂದೆ ಬಂದಾಗ, ಒಂದು ಫೋಟೋಗೆ 100 ರೂಪಾಯಿ ಕೊಡಬೇಕು ಎಂದು ಅವರು ಹಾಸ್ಯವಾಗಿ ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಬಾಲಕರಲ್ಲಿ ಒಬ್ಬ 200 ರೂಪಾಯಿ ಕೊಡಲು ಸಿದ್ಧನಾದ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ. ಬಳಿಕ ನಗುತ್ತಾ ಮಕ್ಕಳ ಜೊತೆ ಫೋಟೋಗೆ ಪೋಸ್ ನೀಡಿದ ವೈಭವ್, ತಮ್ಮ ಸರಳತೆ ಮತ್ತು ಸ್ನೇಹಪರ ನಡೆ ಮೂಲಕ ಮತ್ತೊಮ್ಮೆ ಮೆಚ್ಚುಗೆ ಗಳಿಸಿದ್ದಾರೆ.

ಇನ್ನೊಂದೆಡೆ, ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಬ್ಯಾಟಿಂಗ್ ಅಬ್ಬರ ಮುಂದುವರಿದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ, ಟೂರ್ನಿಯ ವೇಗದ ಶತಕಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !