May 4, 2026
Monday, May 4, 2026
spot_img

ಬಾತುಕೋಳಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿದ ನಾಲ್ವರು ಪುಟಾಣಿಗಳು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರು ಜಿಲ್ಲೆಯ ಅರಳಗುಪ್ಪೆ ಗ್ರಾಮದಲ್ಲಿ ಮನಕಲುಕುವ ದುರಂತವೊಂದು ಸಂಭವಿಸಿದ್ದು, ಆಟವಾಡುತ್ತಾ ಕೆರೆಯತ್ತ ತೆರಳಿದ್ದ ನಾಲ್ವರು ಪುಟ್ಟ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಒಂದೇ ಗ್ರಾಮದ ನಾಲ್ಕು ಮನೆಗಳಲ್ಲಿ ಆವರಿಸಿರುವ ಈ ಶೋಕ, ಗ್ರಾಮಸ್ಥರನ್ನೇ ನಡುಗಿಸಿದೆ. ಮತ್ತೊಂದು ಮಗು ಅದೃಷ್ಟವಶಾತ್ ಪಾರಾಗಿದೆ.

ಮಾಹಿತಿ ಪ್ರಕಾರ, ಮಕ್ಕಳು ಕೆರೆಯ ಬಳಿ ಕಂಡ ಬಾತುಕೋಳಿಯನ್ನು ಹಿಡಿಯುವ ಉತ್ಸಾಹದಲ್ಲಿ ನೀರಿನೊಳಗೆ ಇಳಿದಿದ್ದಾರೆ. ಆದರೆ ಆಳದ ಅಂದಾಜಿಲ್ಲದೆ ನೀರಿನಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ನಾಲ್ಕು ವರ್ಷದ ಅರ್ಮಾನ್ ಹೇಗೋ ಪಾರಾಗಿ ಬದುಕುಳಿದಿದ್ದಾನೆ.

ಇದನ್ನೂ ಓದಿ:

ಮೃತ ಮಕ್ಕಳನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮನಕಲುಕುವಂತಿತ್ತು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !