May 10, 2026
Sunday, May 10, 2026
spot_img

ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಂಗಳದಲ್ಲಿ ಆಟದ ರೋಚಕತೆ ಮಾತ್ರವಲ್ಲ, ಆಟಗಾರರ ಸಂಭ್ರಮಾಚರಣೆಗಳೂ ಅಭಿಮಾನಿಗಳ ಗಮನ ಸೆಳೆಯುತ್ತವೆ.

ಇದೀಗ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ನಡೆದ ಒಂದು ತಮಾಷೆಯ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಕೆಟ್ ಸಂಭ್ರಮದಿಂದ ಆರಂಭವಾದ ಜಿದ್ದಾಜಿದ್ದಿಗೆ, ಪಂದ್ಯದ ಫಲಿತಾಂಶದ ಮೂಲಕ ಸೊಗಸಾದ ಉತ್ತರ ಸಿಕ್ಕಿದೆ.

ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆಟಗಾರ ರವೀಂದ್ರ ಜಡೇಜಾ, ಎದುರಾಳಿ ಪ್ರಮುಖ ಬ್ಯಾಟರ್ ವಿಕೆಟ್ ಪಡೆದ ಬಳಿಕ ವಿಶೇಷವಾಗಿ ‘ಪಾಕೆಟ್’ ಸಂಭ್ರಮಾಚರಣೆ ಮಾಡಿದರು. ತಮ್ಮ ಜೇಬಿನತ್ತ ತೋರಿಸಿ, ಎದುರಾಳಿಯ ವಿಕೆಟ್ ತಮ್ಮ ಹಿಡಿತದಲ್ಲಿದೆ ಎಂಬ ಸಂದೇಶ ನೀಡುವ ರೀತಿಯಲ್ಲಿ ಅವರು ಸಂಭ್ರಮಿಸಿದರು. ಈ ದೃಶ್ಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.

ಆದರೆ ಪಂದ್ಯ ಮುಗಿದ ಬಳಿಕ ಗುಜರಾತ್ ತಂಡದ ಸ್ಪಿನ್ ಬೌಲರ್ ರಶೀದ್ ಖಾನ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಜೇಬಿನಲ್ಲಿ ಏನೋ ಹುಡುಕುವಂತೆ ನಟಿಸಿದ ಅವರು, ಕೊನೆಯಲ್ಲಿ “ನನ್ನ ಪಾಕೆಟ್‌ನಲ್ಲಿ ಎರಡು ಅಂಕಗಳಿವೆ” ಎಂಬ ಸಂದೇಶ ಸಾರಿದರು.

ವಿಕೆಟ್ ಗಳಿಸುವುದು ಒಂದು ಸಂಭ್ರಮವಾದರೆ, ತಂಡಕ್ಕೆ ಗೆಲುವು ತಂದುಕೊಡುವ ಎರಡು ಅಂಕಗಳೇ ನಿಜವಾದ ಸಾಧನೆ ಎಂಬ ಅರ್ಥದಲ್ಲಿ ರಶೀದ್ ಖಾನ್ ನೀಡಿದ ಈ ಉತ್ತರ ಇದೀಗ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !