August 22, 2026
Saturday, August 22, 2026
spot_img

ಪ್ರಧಾನಿ ಮೋದಿ ಹೇಳಿದ್ಮೇಲೆ ಮುಗೀತು! ಅಡುಗೆಗೆ ಬಳಸುವ ಎಣ್ಣೆಯ ದರ ಇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ನಿನ್ನೆ ಕೆಲವು ಸಲಹೆಗಳು ಹಾಗೂ ಕೆಲವು ತ್ಯಾಗಗಳನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ. ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ನಿಂದ ಸರ್ವೈವ್‌ ಆಗೋದಕ್ಕೆ ಸೂತ್ರಗಳನ್ನು ನೀಡಿದ್ದಾರೆ. ಪ್ರಧಾನಿ ಹೇಳಿಕೆಯ ಆಧಾರದ ಮೇಲೆ ಅಡುಗೆ ಎಣ್ಣೆಯ ದರ ಕುಸಿತವಾಗಿದೆ.

ಪ್ರಧಾನಿ ಮೋದಿ ದೇಶದ ಒಳಿತಿಗೋಸ್ಕರ ಜನರು ಬಂಗಾರ ಕೊಳ್ಳೋದನ್ನು ನಿಲ್ಲಿಸಬೇಕು, ಗೃಹಿಣಿಯರು ಅಡುಗೆಯಲ್ಲಿ ಎಣ್ಣೆ ಕಡಿಮೆ ಬಳಕೆ ಮಾಡಬೇಕು. ಇದು ಆರೋಗ್ಯ ಹಾಗೂ ಹಣಕಾಸಿನ ವಿಚಾರದಲ್ಲಿಯೂ ಉತ್ತಮ ನಿರ್ಧಾರವಾಗಲಿದೆ ಎಂದಿದ್ದರು.

ಬೆಂಗಳೂರಿನಲ್ಲಿ ಎಲ್ಲ ಬ್ರ್ಯಾಂಡ್‌ನ ಎಣ್ಣೆಯ ದರವೂ ಲೀಟರ್‌ಗೆ ಮೂರು ರೂಪಾಯಿಯಷ್ಟು ಕಡಿಮೆಯಾಗಿದೆ. ಒಂದು ಟಿನ್‌ ಎಣ್ಣೆಯ ದರ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಪ್ರಧಾನಿ ಮೋದಿ ಏನೇ ಹೇಳಿದರೂ ಅದಕ್ಕೆ ತೂಕವಿರುತ್ತದೆ ಎಂದು ನಂಬಿರುವ ಜನ ಅವರ ಮಾತುಗಳನ್ನು ಕೇಳಿ, ಫಾಲೋ ಮಾಡಲು ಪ್ರಯತ್ನ ಪಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಎಣ್ಣೆ ದರ ಇಳಿಕೆ ಬೆನ್ನಲ್ಲೇ ಅಕ್ಕಿಯ ದರ ಏರಿಕೆಯಾಗಿದೆ. ನಮ್ಮ ರಾಜ್ಯದ ಅಕ್ಕಿ ಬೇರೆ ದೇಶಗಳಿಗೆ ರಫ್ತು ಆಗುತ್ತಿದೆ. ಅಕ್ಕಿಯ ಸಪ್ಲೇ ಕೂಡ ಕಡಿಮೆಯಾಗುತ್ತಿರುವ ಕಾರಣ ಶೇ.10% ದರ ಏರಿಕೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !