May 12, 2026
Tuesday, May 12, 2026
spot_img

Sweet Confusion | ಕೇಕ್ vs ಪೇಸ್ಟ್ರಿ : ಇವೆರಡರ ನಡುವೆ ಏನ್ ವ್ಯತ್ಯಾಸ ಇದೆ? ಎರಡೂ ಸಿಹಿನೇ ಅಲ್ವಾ?

ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ ಅಥವಾ ಯಾವುದೇ ಫಂಕ್ಷನ್ ಆಗಿರಲಿ ಆ ಸಂಭ್ರಮವನ್ನು ಇನ್ನಷ್ಟು ವಿಶೇಷವಾಗಿಸುವುದು ಕೇಕ್ ಮತ್ತು ಪೇಸ್ಟ್ರಿಯ ಸಿಹಿ ರುಚಿ. ಒಂದನ್ನು ಕತ್ತರಿಸಿ ಎಲ್ಲರೂ ಹಂಚಿಕೊಳ್ಳುತ್ತಾರೆ, ಇನ್ನೊಂದು ಕಟ್ ಮಾಡಿಯೇ ಇಟ್ಟಿರುತ್ತಾರೆ. ನೋಡಲು ಎರಡೂ ಒಂದೇ ತರಹ ಅನ್ನಿಸಿದರೂ, ಕೇಕ್ ಮತ್ತು ಪೇಸ್ಟ್ರಿ ನಡುವೆ ಸುಮಾರು ವ್ಯತ್ಯಾಸಗಳಿವೆ.

ಕೇಕ್ ಒಂದು ದೊಡ್ಡ ಗಾತ್ರದ ಸಿಹಿ ಬೇಕ್ ಐಟಂ. ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ, ಸಂಭ್ರಮಗಳಿಗೆ ಬಳಸಲಾಗುತ್ತದೆ. ಹಿಟ್ಟು, ಸಕ್ಕರೆ, ಮೊಟ್ಟೆ, ಬೆಣ್ಣೆ ಮತ್ತು ಬೇಕಿಂಗ್ ಪೌಡರ್ ಬಳಸಿ ತಯಾರಿಸಲಾಗುತ್ತದೆ.

ಕೇಕ್‌ನ ಮುಖ್ಯ ವಿಶೇಷತೆ ಎಂದರೆ ಅದರ ಮೃದು (soft) ಮತ್ತು ಸ್ಪಂಜಿ ಟೆಕ್ಸ್ಚರ್. ಇದನ್ನು ಸಾಮಾನ್ಯವಾಗಿ ದೊಡ್ಡ ಭಾಗಗಳಲ್ಲಿ ಕತ್ತರಿಸಿ ಸರ್ವ್ ಮಾಡಲಾಗುತ್ತದೆ.

ಪೇಸ್ಟ್ರಿ ಸಾಮಾನ್ಯವಾಗಿ ಕೇಕ್‌ಗಿಂತ ಸಣ್ಣ ಗಾತ್ರದ, ಲೇಯರ್ಡ್ ಅಥವಾ ಕ್ರಂಚಿ ಸ್ವರೂಪದ ಸಿಹಿ ಆಹಾರ. ಇದು ಹಿಟ್ಟು ಮತ್ತು ಬೆಣ್ಣೆಯಿಂದ ತಯಾರಾಗುತ್ತದೆ ಮತ್ತು ಕೆಲವೊಮ್ಮೆ ಹಣ್ಣು, ಕ್ರೀಮ್ ಅಥವಾ ಚಾಕೊಲೇಟ್ ಫಿಲ್ಲಿಂಗ್ ಇರುತ್ತದೆ. ಪೇಸ್ಟ್ರಿಯ ಮುಖ್ಯ ವಿಶೇಷತೆ ಅದರ ಫ್ಲೇಕಿ ಅಥವಾ ಲೈಟ್ ಟೆಕ್ಸ್ಚರ್ ಮತ್ತು ಸಿಂಗಲ್ ಸರ್ವಿಂಗ್ ಗಾತ್ರ.

ಕೇಕ್ ಮತ್ತು ಪೇಸ್ಟ್ರಿ ನಡುವಿನ ವ್ಯತ್ಯಾಸ

ಕೇಕ್ ದೊಡ್ಡ ಗಾತ್ರದ ಸಂಭ್ರಮದ ಡೆಸರ್ಟ್ ಆಗಿದ್ದು, ಪೇಸ್ಟ್ರಿ ಸಣ್ಣ ಹಾಗೂ ವೈಯಕ್ತಿಕ ಸರ್ವಿಂಗ್‌ಗಾಗಿ ಇರುತ್ತದೆ. ಕೇಕ್ ಸ್ಪಂಜಿ ಮತ್ತು ಮೃದುವಾಗಿದ್ದರೆ, ಪೇಸ್ಟ್ರಿ ಕ್ರಂಚಿ ಅಥವಾ ಲೇಯರ್ಡ್ ಆಗಿರುತ್ತದೆ.

ಕೇಕ್ ಸಾಮಾನ್ಯವಾಗಿ ಈವೆಂಟ್‌ಗಳಿಗೆ ಬಳಸಲಾಗುತ್ತದೆ, ಆದರೆ ಪೇಸ್ಟ್ರಿ ಸ್ನ್ಯಾಕ್ ಅಥವಾ ಟೀ ಟೈಮ್ ಡೆಸರ್ಟ್ ಆಗಿ ಜನಪ್ರಿಯ.

ಸರಳವಾಗಿ ಹೇಳುವುದಾದರೆ, ಕೇಕ್ ಒಂದು ಸೆಲೆಬ್ರೇಷನ್ ಡೆಸರ್ಟ್ ಆದರೆ ಪೇಸ್ಟ್ರಿ ಒಂದು ಕ್ವಿಕ್ ಸ್ವೀಟ್ ಸ್ನ್ಯಾಕ್. ಎರಡೂ ರುಚಿಯಲ್ಲಿ ವಿಶೇಷವಾದರೂ ಬಳಕೆ ಮತ್ತು ರಚನೆಯಲ್ಲಿ ವಿಭಿನ್ನ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !