ಹೊಸದಿಗಂತ ಕುಶಾಲನಗರ:
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆ ಹಾಗೂ ಜೀವನದಿ ಕಾವೇರಿಯ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಹಾರಂಗಿ ಜಲಾಶಯಕ್ಕೆ ಜಾರ್ಖಂಡ್ ರಾಜ್ಯದ ಹಣಕಾಸು ಸಚಿವ ರಾಧಾಕೃಷ್ಣ ಕಿಶೋರ್ ಅವರು ತಮ್ಮ ಪತ್ನಿಯೊಂದಿಗೆ ಇತ್ತೀಚೆಗೆ ಭೇಟಿ ನೀಡಿದರು.
ಜಲಾಶಯದ ಸೌಂದರ್ಯವನ್ನು ಕಣ್ತುಂಬಿಕೊಂಡ ಸಚಿವರು, ಅಣೆಕಟ್ಟೆಯ ನಿರ್ವಹಣೆ ಮತ್ತು ನೀರಿನ ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಜಲಾಶಯದ ಸಮೀಪದಲ್ಲೇ ಇರುವ ಪ್ರಸಿದ್ಧ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ ದಂಪತಿಗಳು, ಆನೆಗಳ ಪಾಲನೆ ಮತ್ತು ಶಿಬಿರದ ಕಾರ್ಯಚಟುವಟಿಕೆಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಡಿ.ಡಿ. ಕಿರಣ್ ಹಾಗೂ ಸೌಮ್ಯ ಅವರು ಉಪಸ್ಥಿತರಿದ್ದು, ಗಣ್ಯರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಜಾರ್ಖಂಡ್ ಸಚಿವರು ಮನಸೋತರು.



