ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೆದರ್‌ಲ್ಯಾಂಡ್ಸ್ ನಲ್ಲಿ ಐತಿಹಾಸಿಕಕ್ಕೆ ಸಾಕ್ಷಿಯಾಗಿದ್ದು, 1000 ವರ್ಷ ಹಳೆಯ ಚೋಳರ ಕಾಲದ ಅಪರೂಪದ ತಾಮ್ರಶಾಸನಗಳನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗಿದೆ.
ನೆದರ್‌ಲ್ಯಾಂಡ್ಸ್ ಗೆ ಪ್ರಧಾನಿ ಮೋದಿ ಅವರು ಪ್ರವಾಸ ಕೈಗೊಂಡಿದ್ದು, ಈ ವೇಳೆ ಐತಿಹಾಸಿಕ ಹಸ್ತಾಂತರ ಪ್ರಕ್ರಿಯೆ ನೆರವೇರಿದ್ದು, ಭಾರತದ ಪುರಾತನ ವಸ್ತುಗಳು ಮರಳಿ ಬರುತ್ತಿದೆ.
ಈ ತಾಮ್ರಶಾಸನಗಳು ರಾಜರಾಜ ಚೋಳ-I ಆಳ್ವಿಕೆಯ ಕಾಲದ ಕ್ರಿ.ಶ. 11ನೇ ಶತಮಾನಕ್ಕೆ ಸೇರಿವೆ. ಇವುಗಳನ್ನು ‘ಆನೈಮಂಗಲಂ ಕಾಪರ್ ಪ್ಲೇಟ್ಸ್’ ಅಥವಾ ‘ಲೈಡನ್ ಪ್ಲೇಟ್ಸ್’ ಎಂದು ಕರೆಯಲಾಗುತ್ತದೆ. ಇದು ಚೋಳ ಸಾಮ್ರಾಜ್ಯದ ಅತ್ಯಂತ ಐತಿಹಾಸಿಕ ದಾಖಲೆಗಳಾಗಿವೆ.
ಈ ಕುರಿತು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಪ್ರತಿ ಭಾರತೀಯರಿಗೂ ಖುಷಿಯ ವಿಚಾರ. 11ನೇ ಶತಮಾನದ ಚೋಳ ತಾಮ್ರಶಾಸನಗಳು ಭಾರತಕ್ಕೆ ಮರಳಿವೆ ಎಂದು ಬರೆದುಕೊಂಡಿದ್ದಾರೆ.
ಈ ಹಸ್ತಾಂತರ ಸಮಾರಂಭದಲ್ಲಿ ನೆದರ್‌ಲ್ಯಾಂಡ್ಸ್ ಪ್ರಧಾನಿ Rob Jetten ಕೂಡ ಉಪಸ್ಥಿತರಿದ್ದರು.
ಈ ತಾಮ್ರಶಾಸನಗಳು ಒಟ್ಟು 21 ದೊಡ್ಡ ತಾಮ್ರ ಫಲಕಗಳನ್ನು ಒಳಗೊಂಡಿದ್ದು, 3 ಸಣ್ಣ ಫಲಕಗಳ ಗುಂಪಾಗಿದ್ದು, ಇವುಗಳಲ್ಲಿ ತಮಿಳು ಮತ್ತು ಸಂಸ್ಕೃತ ಭಾಷೆಯಲ್ಲಿ ಶಾಸನಗಳು ಕೆತ್ತಲ್ಪಟ್ಟಿವೆ. ಅವು ಮಹಾನ್ ರಾಜೇಂದ್ರ ಚೋಳ I ಗೆ ಸಂಬಂಧಿಸಿವೆ. ಅವರ ತಂದೆ ರಾಜ ರಾಜರಾಜ I ಮಾಡಿದ ಮೌಖಿಕ ಬದ್ಧತೆಯನ್ನು ಔಪಚಾರಿಕಗೊಳಿಸುತ್ತವೆ. ಅವು ಚೋಳರ ಶ್ರೇಷ್ಠತೆಯನ್ನು ಸಹ ಪ್ರದರ್ಶಿಸುತ್ತವೆ. ಭಾರತದಲ್ಲಿ ನಾವು ಚೋಳರು, ಅವರ ಸಂಸ್ಕೃತಿ ಮತ್ತು ಅವರ ಕಡಲ ಕೌಶಲ್ಯದ ಬಗ್ಗೆ ಅಪಾರ ಹೆಮ್ಮೆಪಡುತ್ತೇವೆ. 19 ನೇ ಶತಮಾನದ ಮಧ್ಯಭಾಗದಿಂದ ತಾಮ್ರ ಫಲಕಗಳನ್ನು ಇರಿಸಲಾಗಿದ್ದ ನೆದರ್‌ಲ್ಯಾಂಡ್ಸ್ ಸರ್ಕಾರ ಮತ್ತು ವಿಶೇಷವಾಗಿ ಲೈಡೆನ್ ವಿಶ್ವವಿದ್ಯಾಲಯಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಮೋದಿ ತಿಳಿಸಿದರು.
ಈ ಅಮೂಲ್ಯ ವಸ್ತುಗಳನ್ನು ಸುಮಾರು 300 ವರ್ಷಕ್ಕೂ ಹೆಚ್ಚು ಕಾಲ ನೆದರ್‌ಲ್ಯಾಂಡ್ಸ್‌ನ ಲೈಡನ್ ವಿಶ್ವವಿದ್ಯಾಲಯದಲ್ಲಿ ಸಂರಕ್ಷಿಸಲ್ಪಟ್ಟಿತ್ತು. 17ನೇ ಶತಮಾನದಲ್ಲಿ ಡಚ್ ಆಡಳಿತ ಕಾಲದಲ್ಲಿ ನಾಗಪಟ್ಟಣಂ ಪ್ರದೇಶದಿಂದ ಈ ಶಾಸನಗಳನ್ನು ಯೂರೋಪ್‌ಗೆ ಕೊಂಡೊಯ್ಯಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
2012ರಿಂದಲೇ ಭಾರತ ಸರ್ಕಾರ ಈ ತಾಮ್ರಶಾಸನಗಳ ವಾಪಸಾತಿಗಾಗಿ ಪ್ರಯತ್ನ ಆರಂಭಿಸಿತ್ತು. 2023ರಲ್ಲಿ ನಡೆದ ಸಭೆಯಲ್ಲಿ ಭಾರತದ ಮಾತಿಗೆ ಬೆಂಬಲ ವ್ಯಕ್ತವಾದ ಬಳಿಕ ನೆದರ್‌ಲ್ಯಾಂಡ್ಸ್ ಸರ್ಕಾರ ಹಸ್ತಾಂತರ ಪ್ರಕ್ರಿಯೆಗೆ ಒಪ್ಪಿಗೆ ನೀಡಿತ್ತು.



