May 18, 2026
Monday, May 18, 2026
spot_img

ಟೆಲ್ ಅವಿವ್‌ ನತ್ತ ಹಾರಿದ ಅಮೆರಿಕ ಶಸ್ತ್ರಾಸ್ತ್ರ ವಿಮಾನಗಳು: ಇರಾನ್ ಮೇಲೆ ಮತ್ತೆ ಯುದ್ಧ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ನಡುವೆಯೇ ಅಮೆರಿಕದ ಸೇನಾ ಚಟುವಟಿಕೆ ಜೋರಾಗಿದೆ. ಜರ್ಮನಿಯ ಮಿಲಿಟರಿ ನೆಲೆಗಳಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತ ಡಜನ್ಗಟ್ಟಲೆ ಅಮೆರಿಕ ವಿಮಾನಗಳು ಇಸ್ರೇಲ್‌ನ ಟೆಲ್ ಅವಿವ್‌ಗೆ ತಲುಪಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.

ಇರಾನ್ ವಿರುದ್ಧ ಮತ್ತೊಮ್ಮೆ ದೊಡ್ಡ ಮಟ್ಟದ ದಾಳಿ ನಡೆಯಬಹುದೇ ಎಂಬ ಪ್ರಶ್ನೆ ಇದೀಗ ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ.

ಟೆಲ್ ಅವಿವ್‌ನಲ್ಲಿ ಭಾರಿ ಸೇನಾ ಚಟುವಟಿಕೆ

ಕಳೆದ 24 ಗಂಟೆಗಳಲ್ಲಿ ಹಲವು ಅಮೆರಿಕ ಸೇನಾ ಕಾರ್ಗೋ ವಿಮಾನಗಳು ಟೆಲ್ ಅವಿವ್‌ಗೆ ಬಂದಿಳಿದಿವೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನಗಳಲ್ಲಿ ಯುದ್ಧೋಪಕರಣಗಳು ಹಾಗೂ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿದೆ. ಇದನ್ನು ಇರಾನ್ ವಿರುದ್ಧದ ಹೊಸ ಸೇನಾ ಕಾರ್ಯಾಚರಣೆಯ ಸಿದ್ಧತೆಯ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:

ಟ್ರಂಪ್ ಕಠಿಣ ಸಂದೇಶ

ಯುರೇನಿಯಂ ಸಂಗ್ರಹ, ನಿರ್ಬಂಧ ತೆರವು ಮತ್ತು ಯುದ್ಧ ಪರಿಹಾರ ಕುರಿತ ಮಾತುಕತೆಗಳು ಸ್ಥಗಿತಗೊಂಡಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. “ಸಮಯ ಕಡಿಮೆಯಾಗಿದೆ, ಬೇಗ ನಿರ್ಧಾರ ಕೈಗೊಳ್ಳಿ” ಎಂದು ಟ್ರಂಪ್ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಹೆಚ್ಚಳ

ಅಮೆರಿಕ ಮತ್ತು ಇಸ್ರೇಲ್‌ನ ಈ ಬೆಳವಣಿಗೆಗಳಿಂದ ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧ ಭೀತಿ ತೀವ್ರವಾಗಿದೆ. ಇರಾನ್ ಕೂಡ ಪ್ರತಿಕ್ರಿಯೆಗೆ ಸಜ್ಜಾಗಿದೆ ಎನ್ನಲಾಗುತ್ತಿದ್ದು, ಜಾಗತಿಕ ರಾಜಕೀಯದಲ್ಲಿ ಹೊಸ ತಲ್ಲಣ ಸೃಷ್ಟಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !