May 21, 2026
Thursday, May 21, 2026
spot_img

ದಿನಭವಿಷ್ಯ: ನೀವು ಭಾವುಕ ವ್ಯಕ್ತಿ ಹೌದು, ಆದರೆ ಇದು ನಿಮ್ಮ ನಿರ್ಧಾರವನ್ನು ಹಾಳುಮಾಡದಿರಲಿ

ಮೇಷ
ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಸವಾಲಿನ ದಿನ. ಹೆಚ್ಚು ಹೊಣೆ. ಆತ್ಮೀಯ ಸಂಬಂಧಕ್ಕೆ ಧಕ್ಕೆ. ಆಪ್ತ ಜತೆ ಮನಸ್ತಾಪ. ಧನವ್ಯಯ.
ವೃಷಭ
ಈಡೇರಿಸಲು ಕಷ್ಟವಾದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ಟೀಕೆಗೆ ಎರವಾಗದಂತೆ ವರ್ತಿಸಿ. ಬಂಧುಗಳ ಜತೆ ನಯವಿನಯವಿರಲಿ.
ಮಿಥುನ
ವೃತ್ತಿಯಲ್ಲಿ ಸಫಲತೆ. ಪರಿಶ್ರಮಕ್ಕೆ ಅಧಿಕ ಫಲ ಪಡೆಯುವಿರಿ. ಹೊಟ್ಟೆ ಕೆಡಿಸುವ ಆಹಾರ ತಿನ್ನದಿರಿ. ಪ್ರೀತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.      
ಕಟಕ
ಹೊಸತನಕ್ಕೆ ಯತ್ನಿಸುವಿರಿ. ಬೇಸರ ಕಳೆಯಲು ಅದು ಒಳಿತು. ಮನಸ್ಸು ಉಲ್ಲಸಿತ ಗೊಳಿಸುವ ಪ್ರಸಂಗ. ಪ್ರೀತಿಸಾಫಲ್ಯ.
ಸಿಂಹ
ಪ್ರಗತಿಯ ದಿನ. ಉದ್ಯೋಗದಲ್ಲಿ ಹೊಸ ಅವಕಾಶ. ಏಕಾಂಗಿಗಳಿಗೆ ವೈವಾಹಿಕ ಬಂಧ ಏರ್ಪಡಬಹುದು. ತೃಪ್ತಿಕರ ಆರ್ಥಿಕ ಪ್ರಗತಿ.  
ಕನ್ಯಾ
ದಂಪತಿಗಳು ತಮ್ಮ ಸಂಬಂಧ ಬಲಪಡಿಸುವ ಕ್ರಮ ತೆಗೆದುಕೊಳ್ಳಬೇಕು.  ಸಣ್ಣ ಭೇದವು ಸಂಬಂಧ ಕೆಡಿಸದಿರಲಿ. ಮುಖ್ಯ ಕಾರ್ಯ ಅಪೂರ್ಣ.
ತುಲಾ
ನಿಮ್ಮ ಕಠಿಣ ದುಡಿಮೆಗೆ ಉತ್ತಮ ಪ್ರತಿಫಲ. ಆದರೆ ಬೇಸರ ತರುವ ಕೆಲವು ಪ್ರಸಂಗ ಉಂಟಾದೀತು. ಸಂಬಂಧ ಹಳಸಬಹುದು.    
ವೃಶ್ಚಿಕ
ವೃತ್ತಿಯಲ್ಲಿ ಸೃಷ್ಟಿಯಾಗಿದ್ದ ಸಮಸ್ಯೆ ಪರಿಹಾರ. ಆದರೆ ಪ್ರೀತಿಯಲ್ಲಿ ಒಡಕು. ಕ್ಷುಲ್ಲಕ ವಿಷಯವೂ ಮನಸ್ಸು ಕೆಡಿಸಬಹುದು.  
ಧನು
ಯಾವುದೋ ವಿಷಯದಲ್ಲಿ ಭಾವುಕರಾಗಿ ನಿರ್ಧಾರ ತಾಳದಿರಿ. ವಿವೇಕದಿಂದ ಚಿಂತಿಸಿ. ಹಿರಿಯರ ಸಲಹೆ ಕೇಳಿರಿ. ಆರ್ಥಿಕ ಒತ್ತಡ ಹೆಚ್ಚು.    
ಮಕರ
ಮಾನಸಿಕ ದುಗುಡಕ್ಕೆ ಕಾರಣವಾಗಿದ್ದ ವಿಷಯ ಇಂದು ಇತ್ಯರ್ಥ. ಆದರೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಉಂಟಾದೀತು.  ಮನಸ್ಸು ದೃಢವಾಗಿರಲಿ.  
ಕುಂಭ
ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ ನಡೆದೀತು. ನೀವು ಎಚ್ಚರದಿಂದಿರಿ. ವೃತ್ತಿಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಿರಿ.
 ಮೀನ
ಒಳಿತು, ಕೆಡಕು ಎರಡನ್ನೂ ಇಂದು ಕಾಣುವಿರಿ. ಉದ್ವಿಗ್ನ ಸ್ಥಿತಿ ಎದುರಿಸಿದರೂ  ಪರಿಹಾರದ ನಿರಾಳತೆ ಕೂಡಾ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !