May 23, 2026
Saturday, May 23, 2026
spot_img

‘ಇದೇನ್ ಬೌಲಿಂಗ್ ಗುರೂ’: ಕೃನಾಲ್ ಎಸೆದ ಬಾಲ್ ಗೆ ಕಾವ್ಯ ಮಾರನ್ ಫುಲ್ ಕನ್ಫ್ಯೂಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋತಿದ್ದರೂ, ಪಂದ್ಯಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಕಾವ್ಯ ಮಾರನ್ ನೀಡಿದ ರಿಯಾಕ್ಷನ್.

ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿಯನ್ನು ಗಮನಿಸಿದ ಎಸ್‌ಆರ್‌ಎಚ್ ಮಾಲೀಕಿ ಕಾವ್ಯ ಮಾರನ್ ಡಗೌಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಚಿತ್ರ ಬೌಲಿಂಗ್‌ ಮೇಲೆ ಕಾವ್ಯ ಅಸಮಾಧಾನ

ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್ ಮಾಡುವ ಕೃನಾಲ್ ಪಾಂಡ್ಯ, ಈ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ವೇಗದ ಬೌನ್ಸರ್‌ಗಳನ್ನು ಪ್ರಯೋಗಿಸಿದರು. ಕೇವಲ ಎರಡು ಓವರ್‌ಗಳಲ್ಲಿ ಹಲವು ಬೌನ್ಸರ್ ಎಸೆದ ಅವರ ಶೈಲಿ ಎದುರಾಳಿ ಆಟಗಾರರನ್ನಷ್ಟೇ ಅಲ್ಲ, ಪ್ರೇಕ್ಷಕರನ್ನೂ ಗೊಂದಲಕ್ಕೀಡು ಮಾಡಿತು. ಡಗೌಟ್‌ನಲ್ಲಿ ಕುಳಿತಿದ್ದ ಕಾವ್ಯ ಮಾರನ್, ಪಕ್ಕದಲ್ಲಿದ್ದ ನಟ ವೆಂಕಟೇಶ್ ಜೊತೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು.

ಕೊಹ್ಲಿ-ಹೆಡ್ ಮಾತಿನ ಚಕಮಕಿ

ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ನಡೆದ ಮಾತಿನ ಚಕಮಕಿ ಕೂಡ ಗಮನ ಸೆಳೆಯಿತು. ಇಬ್ಬರು ಆಟಗಾರರ ನಡುವಿನ ಆಕ್ರಮಣಕಾರಿ ಕ್ಷಣಗಳು ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !