July 14, 2026
Tuesday, July 14, 2026
spot_img

Mango Pudding | ಮಾವಿನ ಹಣ್ಣಿನ ಸೀಸನ್ ನಲ್ಲಿ ರುಚಿಯಾದ ಮ್ಯಾಂಗೋ ಪುಡ್ಡಿಂಗ್ ಮಾಡಿಲ್ಲ ಅಂದ್ರೆ ಹೇಗೆ?

ಬೇಸಿಗೆಯಲ್ಲಿ ಮಾವಿನ ಹಣ್ಣಿನಿಂದ ಮಾಡುವ ಸಿಹಿತಿನಿಸುಗಳ ರುಚಿಯೇ ಬೇರೆ. ಅದರಲ್ಲೂ ತಂಪಾದ ಮ್ಯಾಂಗೋ ಪುಡ್ಡಿಂಗ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಡೆಸರ್ಟ್. ಕೇವಲ ಕೆಲವು ಸರಳ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸಿಹಿ, ಬಾಯಲ್ಲಿಟ್ಟರೆ ಕರಗಿ ಹೋಗೋದು ಖಂಡಿತ

ಬೇಕಾಗುವ ಸಾಮಗ್ರಿಗಳು

ಮಾಗಿದ ಮಾವಿನ ಹಣ್ಣು – 2
ಹಾಲು – 1½ ಕಪ್
ಸಕ್ಕರೆ – 2 ರಿಂದ 3 ಚಮಚ
ಕಾರ್ನ್‌ಫ್ಲೋರ್ – 5 ಚಮಚ
ನಿಂಬೆ ರಸ – 4 ರಿಂದ 5 ಹನಿಗಳು

ಮಾಡುವ ವಿಧಾನ

ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಮಿಕ್ಸರ್ ಜಾರ್‌ಗೆ ಮಾವಿನ ಹಣ್ಣಿನ ತುಂಡುಗಳು, ಹಾಲು ಮತ್ತು ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಂಡು ಪ್ಯೂರಿ ತಯಾರಿಸಿಕೊಳ್ಳಿ.

ಈ ಮಿಶ್ರಣವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಬೇರೆ ಒಂದು ಬಟ್ಟಲಿನಲ್ಲಿ ಸ್ವಲ್ಪ ಹಾಲಿಗೆ ಕಾರ್ನ್‌ಫ್ಲೋರ್ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕರಗಿಸಿಕೊಳ್ಳಿ.

ಈಗ ಕುದಿಯುತ್ತಿರುವ ಮಾವಿನ ಮಿಶ್ರಣಕ್ಕೆ ಕಾರ್ನ್‌ಫ್ಲೋರ್ ಮಿಶ್ರಣವನ್ನು ನಿಧಾನವಾಗಿ ಸೇರಿಸಿ, ಕೈಯಾಡಿಸುತ್ತಾ ಇರಬೇಕು. ಸುಮಾರು 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿದರೆ ಮಿಶ್ರಣ ಗಟ್ಟಿಯಾಗಲು ಶುರುವಾಗುತ್ತದೆ.

ನಂತರ ಸ್ಟೌವ್ ಆರಿಸಿ ನಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ. ಸಿದ್ಧವಾದ ಮಿಶ್ರಣವನ್ನು ಬೌಲ್ ಅಥವಾ ಪುಡ್ಡಿಂಗ್ ಮೋಲ್ಡ್‌ಗೆ ಸುರಿದು ಸಂಪೂರ್ಣ ತಣ್ಣಗಾಗಲು ಬಿಡಿ. ಆಮೇಲೆ 4 ರಿಂದ 5 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟು ಸೆಟ್ ಮಾಡಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !