January19, 2026
Monday, January 19, 2026
spot_img

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ: 17 ಸದಸ್ಯರ ಯುಎಇ ಟೀಮ್ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕೇವಲ 5 ದಿನಗಳು ಬಾಕಿ ಇರುವಾಗ ಯುಎಇ ತನ್ನ 17 ಸದಸ್ಯರ ತಂಡವನ್ನುಪ್ರಕಟಿಸಿದೆ.

ತಂಡವನ್ನು ಮುಹಮ್ಮದ್ ವಸೀಮ್ ಮುನ್ನಡೆಸಲಿದ್ದಾರೆ. ಮಟಿಯುಲ್ಲಾ ಖಾನ್ ಮತ್ತು ಸಿಮ್ರನ್‌ಜೀತ್ ಸಿಂಗ್ ಹೊಸ ಸೇರ್ಪಡೆಯಾಗಿದೆ. ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ.

2016 ರ ನಂತರ ಮೊದಲ ಬಾರಿಗೆ ಯುಎಇ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿದೆ. ಆಗ ಮೊದಲ ಬಾರಿಗೆ ಟಿ 20 ಸ್ವರೂಪದಲ್ಲಿ ಪಂದ್ಯಾವಳಿಯನ್ನು ಆಡಲಾಯಿತು ಮತ್ತು ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು. ಯುಎಇ ತಂಡ ಗ್ರೂಪ್ ಎ ವಿಭಾಗದಲ್ಲಿದ್ದು, ಸೆಪ್ಟೆಂಬರ್ 10 ರಂದು ದುಬೈನಲ್ಲಿ ಭಾರತವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಯುಎಇ ತಂಡ
ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ (ವಿ.ಕೀ.), ಆಸಿಫ್ ಖಾನ್, ಧ್ರುವ ಪರಾಶರ್, ಎಥನ್ ಡಿ’ಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವಾದುಲ್ಲಾ,ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿ.ಕೀ.), ರೋಹಿದ್ ಖಾನ್, ಸಿಮ್ರಂಜೀತ್ ಸಿಂಗ್ ಮತ್ತು ಸಘೀರ್ ಖಾನ್.

Must Read