May 29, 2026
Friday, May 29, 2026
spot_img

ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆ ಅರ್ಧಕ್ಕೆ ಮೊಟಕು: ನೂತನ ಸರಕಾರದ ವಿರುದ್ಧ ರಾಜ್ಯಪಾಲ ಅರ್ಲೇಕರ್ ಅಸಮಾಧಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನಸಭೆಯ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಚರಣಗಳನ್ನು ಹಾಡದೆ ಇರುವ ಸರಕಾರದ ಕ್ರಮದ ವಿರುದ್ಧ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ಚರಣ ಮಾತ್ರ ನುಡಿಸಿದ ಬ್ಯಾಂಡ್ ತಂಡ

ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೊದಲು ಮತ್ತು ನಂತರ ಬ್ಯಾಂಡ್ ತಂಡವು ವಂದೇ ಮಾತರಂ ಹಾಡಿನ ಮೊದಲ ಚರಣಗಳನ್ನು ಮಾತ್ರ ನುಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

ಸರಕಾರದ ವಿರುದ್ಧ ರಾಜ್ಯಪಾಲರು ಕಿಡಿ

ಈ ಕುರಿತು ಮಾತನಾಡಿದ ರಾಜ್ಯಪಾಲ ಅರ್ಲೇಕರ್, ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದು ಶಿಷ್ಟಚಾರ. ರಾಜ್ಯಪಾಲರು ಹಾಜರಿದ್ದಾಗ ವಂದೇ ಮಾತರಂನ ಸಂಪೂರ್ಣ ಹಾಡನ್ನು ಹಾಡಬೇಕು. ಆದರೆ ಇಲ್ಲಿ ಹಾಡನ್ನು ಹಾಡದೆ ಕೇವಲ ನುಡಿಸಲಾಯಿತು. ಈ ಕುರಿತು ಈಗಾಗಲೇ ವಿಧಾನಸಭಾ ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್ ಅವರ ಮಾತನಾಡಿದ್ದೇನೆ. ಮುಂದೆ ಸರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಆಕ್ರೋಶ ಹೊರಹಾಕಿದ ಬಿಜೆಪಿ

ಯುಡಿಎಫ್ ಸರ್ಕಾರದ ವಿರುದ್ಧ ಬಿಜೆಪಿ ಕೂಡ ಆಕ್ರೋಶ ಹೊರಹಾಕಿದ್ದು, ಇದು ರಾಜ್ಯಪಾಲರಿಗೆ ಮಾಡಿದ ಅಪಮಾನ. ಯುಡಿಎಫ್ ಸರ್ಕಾರವು ಜಮಾತೆ-ಇ-ಇಸ್ಲಾಮಿ ಮತ್ತು ಸಿಪಿಎಂನ ಅಭಿಪ್ರಾಯಗಳಿಗೆ ತಲೆಬಾಗಿದೆ ಎಂದು ಟೀಕಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !