September 7, 2026
Monday, September 7, 2026
spot_img

18 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ

ಹೊಸದಿಗಂತ ವರದಿ ವಿಜಯಪುರ:

ಕೆಬಿಜೆಎನ್‌ಎಲ್ ಕೆನಾಲ್ ಬಿಲ್ ಪಾವತಿಗಾಗಿ ಲಂಚದ ಬೇಡಿಕೆಯಿಟ್ಟ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಜಿಲ್ಲೆಯ ಸಾಲೋಟಗಿಯಲ್ಲಿ ನಡೆದಿದೆ.

ಕೆಬಿಜೆ ಎನ್ ಎಲ್ ಉಪ ವಿಭಾಗ ನಂಬರ್ ಒಂದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ 10 ಸಾವಿರ ಲಂಚಕ್ಕೆ ಹಾಗೂ ಕೆಬಿಜೆ ಎನ್ ಎಲ್ ಉಪ ವಿಭಾಗ ನಂಬರ್ ಒಂದರ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ 8 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಒಟ್ಟು 3,71,419 ಬಿಲ್ ಪಾವತಿಗಾಗಿ ಈ ಇಬ್ಬರು ಅಧಿಕಾರಿಗಳು 18 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು, ಲಂಚದ ಹಣ ಪಡೆಯುತ್ತಿದ್ದ ವೇಳೆ ಹಣದ ಸಮೇತ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಾನಾಸಾಹೇಬ್ ರೂಡಗಿ ಎಂಬವರ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !