ಹೊಸ ದಿಗಂತ ವರದಿ, ವಿಜಯಪುರ:
ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದು ನೋಡಿದರೆ ಇದು ಒಳ್ಳೆಯ ದಿನಗಳ ಬರುತ್ತಿವೆ ಎಂದು ಸಚಿವ ಎಂ.ಬಿ. ಪಾಟೀಲ್ ಲೇವಡಿ ಮಾಡಿದರು.
ನಗರದಲ್ಲಿ ಗ್ಯಾಸ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಪ್ರಧಾನಿಯಾಗುವ ಮುಂಚೆ, ಯುಪಿಎ ಸರ್ಕಾರದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಪೆಟ್ರೋಲ್ ಬೆಲೆ 65 ಇತ್ತು ಡೀಸೆಲೆ ಬೆಲೆ 58, ಗ್ಯಾಸ್ ಸಿಲಿಂಡರ್ ಬೆಲೆ 415 ಇತ್ತು. ಡಾಲರ್ ಬೆಲೆ 58, 60 ರೂಪಾಯಿ ಇತ್ತು. ಈಗ ಡಾಲರ್ ಬೆಲೆ 96 ಆಗಿದೆ ಇದೆಲ್ಲವೂ ಅಚ್ಛೇ ದಿನದ ಭಾಗ ಎಂದರು.
ವಿಶ್ವ ಗುರುವಿನ ಕೊಡುಗೆ
ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದರು, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು, ರಸಗೊಬ್ಬರ ಸಿಗುತ್ತಿಲ್ಲ, ಬೆಲೆ ತ್ರಿಬಲ್ ಆಗಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು, 12 ವರ್ಷದಲ್ಲಿ 24 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಪಕೋಡಾ ಮಾರಲು ಹೋಗು ಎಂದರು, ಈಗ ಅದೂ ಕೂಡ ಕಷ್ಟವಾಗಿದೆ ಗ್ಯಾಸ್ ಇಲ್ಲ. ಅಡುಗೆ ಎಣ್ಣೆ ಬೆಲೆ ಎರಡನೂರು ತಲುಪಿದೆ. ಇದೆಲ್ಲವೂ ನರೇಂದ್ರ ಮೋದಿ ವಿಶ್ವ ಗುರುವಿನ ಕೊಡುಗೆ ಎಂದು ದೂರಿದರು.
ಬೆಲೆ ದುಬಾರಿ ಆದರೂ ಕೊಂಡುಕೊಳ್ಳುತ್ತೇವೆ ಎಂಬ ಬಿಜೆಪಿಗರ ಮಾತು ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಗರು ನೀವು ಶ್ರೀಮಂತರು ವ್ಯಾಪಾರಿಗಳು, ಬಡವರು ಏನು ಮಾಡಬೇಕು. ಸಾಮಾನ್ಯ ವರ್ಗದ ಜನರಿಗೆ ಇದು ಅಚ್ಚೇ ದಿನ. ಈಗ ಸಾಮಾಜಿಕ ಜಾಲತಾಣದಲ್ಲಿ ಮೋದಿ ವಿರುದ್ದ ಟೀಕೆ ಆರಂಭಗೊಂಡಿದೆ. ಹಿಂದು, ಮುಸ್ಲಿಂ ಅಂತಾ ಹೇಳಿ ಹಿಂದುಗಳ ಮತ ಪಡೆದುಕೊಳ್ಳುವುದು ಬಿಟ್ಟರೆ ಏನೂ ಆಗಿಲ್ಲ ಎಂದರು.
ಆರ್ಥಿಕವಾಗಿ ಮನಮೋಹನ ಸಿಂಗ್ ಭಾರತವನ್ನು ಕಟ್ಟಿದ್ದರು, ವಿಶ್ವಗುರು ಮೋದಿ ಅದನ್ನು ಸರ್ವನಾಶ ಮಾಡಿದ್ದಾರೆ ಎಂದರು.
ಇಂಡಿ ಒಕ್ಕೂಟ ಸಭೆಗೆ ಮಿತ್ರ ಪಕ್ಷಗಳ ವಿರೋಧ ವಿಚಾರಕ್ಕೆಪ್ರತಿಕ್ರಿಯಿಸಿ ಅವರು, ಅದು ರಾಜಕೀಯವಾಗಿ ಇದು ನಡೆಯುತ್ತದೆ. ಅದನ್ನು ಅವರು ನಮ್ಮ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅದನ್ನು ನಿಭಾಯಿಸ್ತಾರೆ ಎಂದರು.
ವಿರೋಧ ಮಾಡ್ತಾರೆ
ಬಿಡದಿ ಟೌನ್ ಶಿಪ್ ಗೆ ವಿರೋಧ ವಿಚಾರ ಪ್ರತಿಕ್ರಿಯಿಸಿದ ಅವರು, ಹಿಂದೆ ಇದೇ ಎಚ್. ಡಿ. ಕುಮಾರಸ್ವಾಮಿ ಇದ್ದಾಗ ಬಿಡದಿ ಟೌನ್ ಶಿಪ್ ಮಾಡಲು ಹೊರಟಿದ್ದರು. ಈಗ ವಿರೋಧ ಪಕ್ಷದಲ್ಲಿ ವಿರೋಧ ಮಾಡ್ತಾರೆ. ಮುಖ್ಯಮಂತ್ರಿಗಳು ಅಲ್ಲಿನ ರೈತರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ ಎಂದರು.



