June 8, 2026
Monday, June 8, 2026
spot_img

ʼಕೊಟ್ಟಿಯೂರು ದೇವಸ್ಥಾನಕ್ಕೆ ಯಾರೂ ಬರಬೇಡಿ, ಕನ್ನಡದ ಭಕ್ತರಿಗೆ ಇಲ್ಲಿ ಅವಮಾನ ಆಗ್ತಿದೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ಶಿವನ ದರುಶನಕ್ಕೆ ತೆರಳಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅಲ್ಲಿಯೇ ಇರುವ ಕನ್ನಡಿಗರು ಆರೋಪ ಮಾಡಿದ್ದಾರೆ.

ಐತಿಹಾಸಿಕ ದೇಗುಲದಲ್ಲಿ ಇದೀಗ ವೈಶಾಖ ಮಹೋತ್ಸವ ಆರಂಭವಾಗಿದ್ದು, ಕನ್ನಡದ ಭಕ್ತರ ಮೇಲೆ ಮಾತ್ರ ದುರ್ವರ್ತನೆ ತೋರಲಾಗುತ್ತಿದೆ ಎನ್ನುವ ಆರೋಪ ಎದುರಾಗಿದೆ. ಕರ್ನಾಟಕದಿಂದ ಸಾವಿರಾರು ಭಕ್ತರು ಕೊಟ್ಟಿಯೂರು ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಿಗೆ ಮಾತ್ರ ಬರಬೇಡಿ ಎಂದು ಕನ್ನಡಿಗರು ಮನವಿ ಮಾಡುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ.

ಈ ದೇಗುಲಕ್ಕೆ ಲಕ್ಷ ಕೋಟಿ ಮಂದಿ ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಆಡಳಿತ ಮಂಡಳಿ ಅನ್ನೋದು ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ಭದ್ರತಾ ಸಿಬ್ಬಂದಿ ಕನ್ನಡಿಗರು ಹಾಗೂ ಇತರ ರಾಜ್ಯದ ಭಕ್ತರ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರನ್ನು ತಳ್ಳುತ್ತಿರುವುದು ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿದ್ದಾರೆ ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !