June 8, 2026
Monday, June 8, 2026
spot_img

EARTHQUAKE | ದಕ್ಷಿಣ ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ, ನೆಲಕ್ಕುರುಳಿದ ಕಟ್ಟಡಗಳು, ಸಿಟಿ ಫುಲ್‌ ಕತ್ತಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ನೆಲಕ್ಕೆ ಉರುಳಿವೆ. 7.8 ತೀವ್ರತೆಯ ಭೂಕಂಪ ಇದಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

ಬೆಳಗ್ಗೆ ದಕ್ಷಿಣ ಫಿಲಿಪೈನ್ಸ್‌ ಮಿಂಡನಾವೋ ದ್ವೀಪದ ಜನರಲ್‌ ಸ್ಯಾಂಟೋಸ್‌ ನಗರದ ಸಮೀಪದಲ್ಲಿ ಕೇಂದ್ರ ಬಿಂದು ಇದೆ ಎಂದು ರಿಕ್ಟರ್‌ ಮಾಪಕ ಹೇಳಿದೆ. ಏಳು ಲಕ್ಷ ಜನಸಂಖ್ಯೆ ಹೊಂದಿರುವ ಸ್ಯಾಂಟೋಸ್‌ ನಗರದಲ್ಲಿ ಸಂಪೂರ್ಣ ಕತ್ತಲು ಆವರಿಸಿದೆ. ನಗರದಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನರಿಗೆ ಭಾರೀ ಸಮಸ್ಯೆ ಎದುರಾಗಿದೆ.

ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವೊಂದು ಭಾಗಶಃ ಕುಸಿದಿದೆ. ಕಚೇರಿ ಸಮಯ ಆರಂಭಕ್ಕೂ ಮುನ್ನವೇ ಭೂಕಂಪ ಸಂಭವಿಸಿದ್ದರಿಂದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈವರೆಗೂ ಯಾವುದೇ ರೀತಿ ಸಾವು-ನೋವು ವರದಿಯಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !