Friday, September 5, 2025

ಬೃಹತ್‌ ಮಾದಕ ವಸ್ತು ಮಾರಾಟ ಜಾಲ ಪತ್ತೆ: ಹೈದರಾಬಾದ್‌ ನಲ್ಲಿ 9 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೇಟಿಂಗ್‌ ಆ್ಯಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಬೃಹತ್‌ ಡ್ರಗ್ಸ್‌ ಮಾರಾಟ ಜಾಲವೊಂದನ್ನ ಹೈದರಾಬಾದ್‌ ವಿಶೇಷ ಕಾರ್ಯಪಡೆ ಪತ್ತೆಹಚ್ಚಿದ್ದು, ಇಬ್ಬರು ಮಾರಾಟಗಾರರು ಹಾಗೂ 7 ಗ್ರಾಹಕರು ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

ಎಂ. ರಮಾಕಾಂತ್ ಅಲಿಯಾಸ್ ಕಿರಣ್ (44) ಮತ್ತು ಮುದವತ್ ಪ್ರಸಾದ್ (30) ಬಂಧಿತ ಡ್ರಗ್ಸ್‌ ಮಾರಾಟಗಾರರು. ರಮಾಕಾಂತ್‌ ಖಾಸಗಿ ಉದ್ಯೋಗಿಯಾಗಿದ್ದರೇ, ಮುದವತ್‌ ವ್ಯಾಕ್ಯೂಮ್ ಕ್ಲೀನರ್ ತಂತ್ರಜ್ಞನಾಗಿದ್ದನು.

ಇದರಲ್ಲಿ ಇಬ್ಬರೂ ಕಳೆದ ವರ್ಷ ಜುಲೈನಲ್ಲಿ ಡ್ರಗ್ಸ್‌ ಮಾರಾಟ ಕೇಸ್‌ನಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಹಳೇ ಚಾಳಿ ಶುರು ಮಾಡಿಕೊಂಡಿದ್ದರು.

ಬಂಧಿತರು ಡೇಟಿಂಗ್‌ ಆ್ಯಪ್‌ಗಳ ಮೂಲಕ ತಮ್ಮ ಪ್ರೊಫೈಲ್‌ಗಳಲ್ಲಿ ʻರಾಕೆಟ್‌ʼ & ʻಪಾರಿವಾಳʼ ಎಂಬ ಕೋಡ್‌ ವರ್ಡ್‌ ಬಳಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ನೈಜೀರಿಯಾ ಮೂಲದವರಿಂದ ಪ್ರತಿ ಗ್ರಾಂ MDMAಗೆ 10,000 ರೂ. ಗಳಿಗೆ ಖರೀದಿಸಿ, ಹೈದರಾಬಾದ್‌ನಲ್ಲಿ ಪ್ರತಿ ಗ್ರಾಂಗೆ 15,000 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಿಂದ 100 ಗ್ರಾಂ ಎಂಡಿಎಂಎ, 10 ಮೊಬೈಲ್ ಫೋನ್‌ಗಳು ಹಾಗೂ ಒಂದು ತೂಕದ ಯಂತ್ರವನ್ನ ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಓರ್ವ ಹೆಚ್‌ಐವಿ ಸೋಂಕಿತನಾಗಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಎಲ್ಲಾ ಆರೋಪಿಗಳನ್ನು ಚಿಲ್ಕಲ್ಗುಡ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ