ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಟೌನ್ಶಿಪ್ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಾ ಇರೋದೆಲ್ಲ ಶುದ್ಧ ನಾಟಕ. ಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗರ ಲೀಡರ್ ಆಗಬಾರದೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದರು.
ಇದೆಲ್ಲಾ ಕುಮಾರಸ್ವಾಮಿ ರಾಜಕೀಯ ಅಷ್ಟೆ. ಈ ಯೋಜನೆಯನ್ನು ಮೊದಲು ಶುರು ಮಾಡಿದ್ದು ಯಾರು ಗೊತ್ತಾ? ಕುಮಾರಸ್ವಾಮಿಯೇ! ಈಗ್ಯಾಕೆ ವಿರೋಧ ಮಾಡ್ತಾರೆ? ಅವರ ಪತ್ನಿ ಅನಿತಾ ಕುಮಾರಸ್ವಾಮಿಗೆ ಸೇರಿದ ನೂರು ಎಕರೆ ಜಮೀನು ಇದೇ ಯೋಜನೆ ವ್ಯಾಪ್ತಿಯಲ್ಲಿ ಬರುತ್ತದೆ. ಇದೆಲ್ಲಾ ನಾಟಕ ಅಷ್ಟೆ ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದರಿಂದಲೇ ಈ ಎಲ್ಲ ನಾಟಕಗಳನ್ನು ಕುಮಾರಸ್ವಾಮಿ ನಡೆಸುತ್ತಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರನ್ನಾಗಿ ಸಹಿಸಲು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಾಧ್ಯವಾಗುತ್ತಿಲ್ಲ. ರೈತರ ವಿರೋಧವಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.



