ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಕಳೆದ ತಿಂಗಳು ನಡೆದ ಮೂವರು ಕುಕಿ ಸಮುದಾಯದ ನಾಯಕರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಬಳಿಕ ಪ್ರಕರಣ ದಾಖಲಾಗಿದ್ದು, ಘಟನೆಯ ಹಿಂದಿರುವ ದೊಡ್ಡ ಸಂಚು ಹಾಗೂ ರಾಷ್ಟ್ರೀಯ ಭದ್ರತೆ ಸಂಬಂಧಿತ ಆಯಾಮಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ತನಿಖೆ ಮುಂದುವರಿದಿದೆ.
ಘಟನೆ ಹೇಗೆ ನಡೆದಿದೆ?
ಮೇ 13ರಂದು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಚುರಚಂದ್‌ಪುರದಿಂದ ಹಿಂದಿರುಗುತ್ತಿದ್ದ ವೇಳೆ ಎರಡು ವಾಹನಗಳ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಈ ವೇಳೆ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್‌ಗೆ ಸೇರಿದ ಮೂವರು ಚರ್ಚ್ ಮುಖಂಡರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.
ಇದನ್ನೂ ಓದಿ:
ಎನ್‌ಐಎ ತನಿಖೆಗೆ ಕಾರಣವೇನು?
ಪ್ರಕರಣದ ಗಂಭೀರತೆ, ನಾಗರಿಕರಲ್ಲಿ ಭೀತಿ ಸೃಷ್ಟಿಸುವ ಉದ್ದೇಶ ಹಾಗೂ ದೊಡ್ಡ ಮಟ್ಟದ ಸಂಚು ಇರುವ ಸಾಧ್ಯತೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯ ಎನ್‌ಐಎ ತನಿಖೆಗೆ ಆದೇಶ ನೀಡಿದೆ.
ಎರಡು ವರ್ಷಗಳಿಂದ ಅಶಾಂತ ಮಣಿಪುರ
ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಿಂದ ಮೇ 2023ರಿಂದ ಮಣಿಪುರ ತೀವ್ರ ಅಶಾಂತಿಯನ್ನು ಎದುರಿಸುತ್ತಿದ್ದು, ಇದುವರೆಗೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡು ಸಂಕಷ್ಟದ ಬದುಕು ನಡೆಸುತ್ತಿವೆ.



