June 25, 2026
Thursday, June 25, 2026
spot_img

ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ಅಲ್ಕಾ ಯಾಜ್ಞಿಕ್: ಆತಂಕಿತ ಅಭಿಮಾನಿಗಳ ಮುಂದೆ ಕೊನೆಗೂ ಮೌನ ಮುರಿದ ಗಾಯಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆತಂಕಗೊಂಡಿದ್ದ ಅಭಿಮಾನಿಗಳು, ಅಲ್ಕಾ ಆರೋಗ್ಯಕ್ಕೆ ಏನಾಗಿದೆ?, ಅವರು ಗಂಭೀರ ಸ್ಥಿತಿಯಲ್ಲಿದ್ದಾರಾ? ಎಂಬ ಚರ್ಚೆ ಆರಂಭಿಸಿದ್ದು, ಈ ಅನುಮಾನಗಳಿಗೆ ಖುದ್ದು ಅವರೇ ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.

ಇದನ್ನೂ ಓಓದಿ:


ನಾನು ಕೇವಲ ತುಂಬಾ ದಣಿದಿದ್ದೆ, ಹಾಗಾಗಿ ವೀಲ್‌ಚೇರ್‌ನಲ್ಲಿ ಬಂದಿದ್ದೆ. ದಯವಿಟ್ಟು ಯಾರೂ ಆತಂಕಪಡಬೇಡಿ, ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಸುಮಧುರ ಗೀತೆಗಳ ಮೂಲಕ ಅಪಾರ ಅಭಿಮಾನಿಗಳನ್ನು ಹಿಂದಿರುವ ಅವರು, ಕಳೆದ ಕೆಲವು ತಿಂಗಳುಗಳಿಂದ ಅಪರೂಪದ ಶ್ರವಣ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುದನ್ನು ಅವರೇ ಹೇಳಿಕೊಂಡಿದ್ದರು. ಇದೀಗ ಅವ್ರು ಮತ್ತೊಂದು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆಯೇ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿತ್ತು. ಅದಕ್ಕೆ ಖುದ್ದು ಅವರೇ ತೆರೆ ಎಳೆದಿದ್ದಾರೆ. ಈ ನಡುವೆ ಆರೋಗ್ಯ ಸಮಸ್ಯೆಗಳ ನಡುವೆಯೂ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವತಃ ತೆರಳಿ ಸ್ವೀಕರಿಸಿರುವುದು ಕೂಡಾ ಅಲ್ಕಾ ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !