June 26, 2026
Friday, June 26, 2026
spot_img

CINE | ವೀಕೆಂಡ್ ಮುಗಿದರೂ ತಗ್ಗದ ಕ್ರೇಜ್; ಜಾಗತಿಕ ಮಟ್ಟದಲ್ಲಿ ‘ಕಾಕ್‌ಟೇಲ್ 2’ ಭರ್ಜರಿ ಕಮಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಶಾಹಿದ್ ಕಪೂರ್, ಸ್ಯಾಂಡಲ್‌ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಜಾಗತಿಕವಾಗಿ ₹109.07 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿದೆ.

ಭಾರತದಲ್ಲಿ ಭರ್ಜರಿ ಕಮಾಯಿ

ದೇಶೀಯ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮೊದಲ 7 ದಿನಗಳಲ್ಲಿ ಭಾರತದಲ್ಲಿ ಒಟ್ಟು ₹70.50 ಕೋಟಿ ನೆಟ್ ಕಲೆಕ್ಷನ್ ಆಗಿದ್ದು, ಗ್ರಾಸ್ ಗಳಿಕೆ ₹84.07 ಕೋಟಿಗೆ ತಲುಪಿದೆ. ವಾರದ ದಿನವಾದ 7ನೇ ದಿನ ಚಿತ್ರ ₹4.25 ಕೋಟಿ ಗಳಿಸಿದೆ. ಇದು 6ನೇ ದಿನದ ಗಳಿಕೆಗೆ (₹5.25 ಕೋಟಿ) ಹೋಲಿಸಿದರೆ ಶೇ. 19 ರಷ್ಟು ಕುಸಿತ ಕಂಡಿದ್ದರೂ, ಕಲೆಕ್ಷನ್ ಸ್ಥಿರವಾಗಿದೆ.

ವಿದೇಶದಲ್ಲೂ ರಶ್ಮಿಕಾ-ಶಾಹಿದ್ ಕ್ರೇಜ್!

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ (Overseas) ಸಿನಿಮಾ ಪ್ರೇಕ್ಷಕರನ್ನು ಸೆಳೆದಿದೆ. ಏಳನೇ ದಿನ ಓವರ್‌ಸೀಸ್‌ನಲ್ಲಿ ₹1 ಕೋಟಿ ಲೂಟಿ ಮಾಡಿದ್ದು, ಒಟ್ಟು ವಿದೇಶಿ ಗಳಿಕೆ ₹25 ಕೋಟಿಗೆ ಏರಿಕೆಯಾಗಿದೆ. ಮುಂಬೈ, ಬೆಂಗಳೂರು, ಜೈಪುರ ಹಾಗೂ ಚೆನ್ನೈ ನಂತಹ ಪ್ರಮುಖ ನಗರಗಳಲ್ಲಿ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ವೀಕೆಂಡ್‌ನಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !