ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ತೆಲುಗು ಚಿತ್ರ ‘ಮಾ ಇಂಟಿ ಬಂಗಾರಂ’ ಸದ್ಯ ಬಾಕ್ಸ್ ಆಫೀಸ್ನಲ್ಲಿ ಕಮಾಯಿ ಮಾಡುತ್ತಾ ಸೂಪರ್ ಹಿಟ್ ಲಿಸ್ಟ್ ಸೇರಿದೆ. ನಟಿ ಸಮಂತಾ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾಗ-2ಕ್ಕೆ ರೆಡಿಯಾಗುತ್ತಿದೆ ಚಿತ್ರತಂಡ
ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಸದ್ಯ ಚಿತ್ರರಂಗದ ಸೂಪರ್ ಟೆಕ್ನಿಕ್ ಆದ ‘ಸೀಕ್ವೆಲ್’ ಮಾಡಲು ತಂಡ ಮುಂದಾಗಿದೆ. ಈ ಬಗ್ಗೆ ನಿರ್ಮಾಪಕ ರಾಜ್ ನಿಡಿಮೋರು ಅಧಿಕೃತ ಸುಳಿವು ನೀಡಿದ್ದು, ಸೀಕ್ವೆಲ್ಗಾಗಿ ಒಂದು ಅದ್ಭುತ ಲೈನ್ ಸಿಕ್ಕಿದೆ ಎಂದು ಖಚಿತಪಡಿಸಿದ್ದಾರೆ. ಇನ್ನು ಎರಡು ವರ್ಷಗಳ ಬಳಿಕ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಮೊದಲ ಭಾಗದ ತಾರಾಗಣವೇ ಮುಂದುವರಿಯಲಿದೆ.
ಕಥೆಯ ಮೇಲಿದೆ ಭಾರಿ ನಿರೀಕ್ಷೆ!
ಮೊದಲ ಭಾಗದಲ್ಲಿ ವಿಲನ್ ಅಂತ್ಯವಾಗಿದ್ದು, ಸಮಂತಾ ಕುಟುಂಬ ಸದ್ಯ ಸುರಕ್ಷಿತವಾಗಿದೆ. ಇಂತಹ ಸಂದರ್ಭದಲ್ಲಿ ಸೀಕ್ವೆಲ್ ಕಥೆ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಸೀಕ್ವೆಲ್ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿರುವ ರಾಜ್ ನಿಡಿಮೋರು, ಮೊದಲ ಭಾಗಕ್ಕಿಂತಲೂ ರೋಚಕವಾದ ಕಥೆಯನ್ನೇ ತರಲಿದ್ದಾರೆ ಎಂಬ ನಂಬಿಕೆ ಸಿನಿಪ್ರೇಕ್ಷಕರದ್ದಾಗಿದೆ.



