September 2, 2026
Wednesday, September 2, 2026
spot_img

ಹೊಸ ಸಿನಿಮಾಗೆ ಸೈನ್‌ ಮಾಡಿದ ನಟ ಯಶ್‌, ತೃಪ್ತಿ ದಿಮ್ರಿ ಹೀರೋಯಿನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಜಿಎಫ್‌, ಟಾಕ್ಸಿಕ್‌ನಂಥ ಮಾಸ್‌ ಫಿಲಂನಲ್ಲಿ ನಟನೆ ಮಾಡುತ್ತಿದ್ದ ಯಶ್‌ ಇದೀಗ ಮತ್ತೆ ಜನರಲ್ಲಿ ಸ್ಪೂರ್ತಿ ತುಂಬುವ ಸಿನಿಮಾ ಒಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ ಪುಟವೊಂದರಲ್ಲಿ ಯಶ್ ಅವರ ಮುಂಬರುವ ಚಿತ್ರದ ಕಥಾಹಂದರ ಹಾಗೂ ತಾರಾಗಣದ ವಿವರಗಳು ಲೀಕ್ ಆಗಿದ್ದು, ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮಾಹಿತಿ ಅನ್ವಯ ಆಕ್ಷನ್‌ ಹಾಗೂ ಎಮೋಷನ್ಸ್‌ ಇರುವ ಸಿನಿಮಾ ಇದಾಗಿದೆ. ಭಾರತೀಯ ಸೇನೆಯನ್ನು ತೊರೆಯುವ ಮಿಲಿಟರಿ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸ್‌ ಪಡೆಗೆ ಸೇರುವ ಸಿನಿಮಾ ಇದಾಗಿದೆ.

ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ಭರವಸೆಯ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಸದ್ಯ ಬಾಲಿವುಡ್‌ನ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ತೃಪ್ತಿ ದಿಮ್ರಿ ಯಶ್ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !