June 29, 2026
Monday, June 29, 2026
spot_img

ಹೊಂಬಾಳೆ ಫಿಲ್ಮ್ಸ್ ಹೊಸ ಧಮಾಕಾ: ಕಾಲಿವುಡ್ ‘ಸಿಂಗಂ’ ಜೊತೆ ಬಿಗ್ ಬಜೆಟ್ ಸಿನಿಮಾ ಅನೌನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈಗ ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಈ ಸಂಸ್ಥೆ, ಇದೀಗ ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಅವರೊಂದಿಗೆ ಹೊಸ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್’ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಈ ಬಿಗ್ ಅಪ್ಡೇಟ್ ಹಂಚಿಕೊಳ್ಳಲಾಗಿದೆ.

‘ಜೈ ಭೀಮ್’ ಖ್ಯಾತಿಯ ಜ್ಞಾನವೇಲ್ ಆ್ಯಕ್ಷನ್ ಕಟ್?

ಕಳೆದ ಮೂರು ದಶಕಗಳಿಂದ ನೈಜ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟ ಸೂರ್ಯ ಅವರನ್ನು ಹೊಂಬಾಳೆ ಸಂಸ್ಥೆ ಆತ್ಮೀಯವಾಗಿ ಸ್ವಾಗತಿಸಿದೆ. ಈ ಹೈ-ಬಜೆಟ್ ಚಿತ್ರಕ್ಕೆ ಯಾರು ನಿರ್ದೇಶಕರು ಎಂಬ ಕುತೂಹಲಕ್ಕೆ ಹೊಂಬಾಳೆ ಸಂಸ್ಥೆಯ ಟ್ವೀಟ್‌ನಲ್ಲೇ ಉತ್ತರವಿದೆ. ‘ಜೈ ಭೀಮ್’ ಖ್ಯಾತಿಯ ಖ್ಯಾತ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರನ್ನು ಈ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದ್ದು, ಇವರೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಖಚಿತವಾಗಿದೆ.

ಸಾಯಿ ಅಭಯಂಕರ್ ಮ್ಯೂಸಿಕ್ ಸೆನ್ಸೇಷನ್

ಇತ್ತೀಚಿನ ಟ್ರೆಂಡಿಂಗ್ ಮ್ಯೂಸಿಕ್ ಸೆನ್ಸೇಷನ್ ಸಾಯಿ ಅಭಯಂಕರ್ ಕೂಡ ಈ ಪ್ರಾಜೆಕ್ಟ್‌ಗೆ ಸೇರಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಇವರನ್ನು ಸಹ ಟ್ಯಾಗ್ ಮಾಡಿದ್ದು, ಚಿತ್ರಕ್ಕೆ ಇವರೇ ಸಂಗೀತ ನೀಡಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ಒಟ್ಟಾರೆಯಾಗಿ, ಈ ಸ್ಟಾರ್ ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !