June 29, 2026
Monday, June 29, 2026
spot_img

ಪ್ರೇಕ್ಷಕರ ಮನಗೆದ್ದ ‘ವೆಲ್ಕಮ್ 3’: ಕೇವಲ 3 ದಿನದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಮಲ್ಟಿಸ್ಟಾರರ್ ಕಾಮಿಡಿ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಜೂನ್ 26 ರಂದು ಸಾಧಾರಣ ಆರಂಭ ಪಡೆದಿದ್ದ ಈ ಸಿನಿಮಾ, ಶನಿವಾರ ಮತ್ತು ಭಾನುವಾರ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮೂರೇ ದಿನಕ್ಕೆ ₹63 ಕೋಟಿ ನೆಟ್ ಕಲೆಕ್ಷನ್!

ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರವು 3ನೇ ದಿನವಾದ ಭಾನುವಾರ ಭಾರತದಲ್ಲಿ ಭರ್ಜರಿ ₹24.75 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ದೇಶಾದ್ಯಂತ ಒಟ್ಟು ₹63.75 ಕೋಟಿ ಗಳಿಸಿದೆ. ಭಾರತದಲ್ಲಿ ಇದರ ಒಟ್ಟು ಗ್ರಾಸ್ ಕಲೆಕ್ಷನ್ ₹76.50 ಕೋಟಿಗೆ ತಲುಪಿದೆ.

100 ಕೋಟಿ ಕ್ಲಬ್‌ನತ್ತ ‘ವೆಲ್ಕಮ್ 3’

ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಓವರ್‌ಸೀಸ್‌ನಲ್ಲಿ ₹16.95 ಕೋಟಿ ಬಾಚಿಕೊಂಡಿದೆ. ಈ ಮೂಲಕ ಜಾಗತಿಕವಾಗಿ ₹93.45 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ, ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಪ್ರಸ್ತುತ ದೇಶಾದ್ಯಂತ 10,867 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ವರ್ಷದ ಅತಿ ದೊಡ್ಡ 3ನೇ ಓಪನಿಂಗ್ ಪಡೆದ ಬಾಲಿವುಡ್ ಚಿತ್ರ ಎನಿಸಿಕೊಂಡಿದೆ.

ತಾರಾಬಳಗದ ನಗುವಿನ ಔತಣ

ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ‘ಹೇರಾ ಫೇರಿ’ ಖ್ಯಾತಿಯ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಜೋಡಿ ಮತ್ತೆ ಒಂದಾಗಿರುವುದು ಮುಖ್ಯ ಆಕರ್ಷಣೆ. ಇವರೊಂದಿಗೆ ದಿಶಾ ಪಟಾನಿ, ಜಾಕ್ವೆಲಿನ್, ರವೀನಾ ಟಂಡನ್, ಜಾನಿ ಲಿವರ್ ಸೇರಿದಂತೆ ದೊಡ್ಡ ತಾರಾಬಳಗವೇ ಪ್ರೇಕ್ಷಕರಿಗೆ ನಗುವಿನ ಔತಣ ಬಡಿಸುತ್ತಿದೆ. ವಾರದ ದಿನಗಳಲ್ಲೂ ಚಿತ್ರ ಇದೇ ವೇಗ ಕಾಯ್ದುಕೊಂಡರೆ ಸಿನಿಮಾ ಬ್ಲಾಕ್‌ಬಸ್ಟರ್ ಆಗುವುದು ಖಚಿತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !