ಹೊಸದಿಗಂತ ವರದಿ ಉತ್ತರಕನ್ನಡ:
ದರೋಡೆ ಹಾಗೂ ಮೀಟರ್ ಬಡ್ಡಿಯ ಪ್ರಕರದಲ್ಲಿದ್ದ ಇಬ್ಬರನ್ನು ಆರು ತಿಂಗಳ ಕಾಲ ಕೋಲಾರದ ಕೆಜಿಎಫ್ ಹಾಗೂ ಮಂಡ್ಯ ಜಿಲ್ಲೆಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪಟ್ಟಣದ ಮಂಜು ನವಲೆ ಎಂಬಾತನನ್ನು ಕೋಲಾರದ (ಕೆಜಿಎಫ್) ಜಿಲ್ಲೆಯ ರಾಬರ್ಟಸನ್ ಪೊಲೀಸ ಠಾಣೆ ವ್ಯಾಪ್ತಿಗೆ ಮತ್ತು ಬಸಾಪುರ ಗ್ರಾಮದ ಮಧುಸಿಂಗ ರಜಪೂತನನ್ನು ಮಂಡ್ಯ ಜಿಲ್ಲೆಯ ನಗರ ಪೊಲೀಸ ಠಾಣೆ ವ್ತಾಪ್ತಿಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಈ ಇಬ್ಬರ ಮೇಲೆ ದರೋಡೆ ಹಾಗೂ ಮೀಟರ ಬಡ್ಡಿ ವ್ಯವಹಾರ ಸೇರಿದಂತೆ ಇತರೆ ಪ್ರಕರಣಗಳು ಇದ್ದವು. ಇವಗಳನ್ನೇ ಬಂಡವಾಳ ಮಾಡುಕೊಂಡು ತಾಲೂಕಿನ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷಿತೆಗೆ ಅಪಾಯವನ್ನು ತಂದು ಸಾರ್ವಜನಿಕ ಶಾಂತಿ, ನೆಮ್ಮದಿ, ಸೌಹಾರ್ದತೆಗೆ, ಆಸ್ತಿಪಾಸ್ತಿ & ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕಂಡು ಬಂದಿದ್ದರಿಂದ ಇಲ್ಲಿನ ಪೊಲೀಸ್ ನಿರೀಕ್ಷಕರು ಈ ಇಬ್ಬರ ವಿರುದ್ಧ ಗಡಿಪಾರಿಗೆ ವಿವರವಾದ ಸೂಕ್ತ ಪ್ರಸ್ತಾವಣೆಯ ಅರ್ಜಿಯನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ್ದರು.
ಇದನ್ನೂ ಓದಿ:
ಅದರಂತೆ ಜಿಲ್ಲಾಪೊಲೀಸ ವರಿಷ್ಠಾಧಿಕಾರಿಗಳು ಅಪರಾಧವುಳ್ಳ ಇಬ್ಬರನ್ನು ಜಿಲ್ಲೆಯಿಂದ ಆರು ತಿಂಗಳಕಾಲ ಗಡಿಪಾರು ಮಾಡಿದ್ದಾರೆ.
ಒಟ್ಟಿನಲ್ಲಿ ತಾಲೂಕಿನಲ್ಲಿ ಮೀಟರ ಬಡ್ಡಿ, ದರೋಡೆ, ಹಾಗೂ ಕೊಲೆ ಸೇರಿದಂತೆ ಇನ್ನಿತರ ಪ್ರಕರಣದಲ್ಲಿರವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಇತ್ತಿಚೆಗೆ ಗುಂಡಾ ಕಾಯ್ದೆಯಲ್ಲಿ ಇಬ್ಬರನ್ನು ಬಳ್ಳಾರಿ ಜೈಲಿಗೆ ಕಳುಹಿಸಿದ್ದರು ಇದೀಗ ಇನ್ನಿಬ್ಬರಿಗೆ ಗಡಿಪಾರು ಮಾಡುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.



