ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸೂಪರ್ ಹಿಟ್ ಚಿತ್ರಗಳಾದ ‘ಆರ್‌ಆರ್‌ಆರ್’, ‘ಬಾಹುಬಲಿ’ ಮತ್ತು ‘ಈಗ’ (Eega) ಪ್ರಸ್ತುತ ಯುರೋಪ್ ಪ್ರವಾಸದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಅಲ್ಲಿನ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
‘ಈಗ’ ಚಿತ್ರದ ದೃಶ್ಯಕ್ಕೆ ಥಿಯೇಟರ್ ಉದ್ವಿಗ್ನ!
ಪ್ಯಾರಿಸ್‌ನಲ್ಲಿ ನಡೆದ ‘ಈಗ’ ಸಿನಿಮಾದ ಪ್ರದರ್ಶನದ ವೇಳೆ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಫ್ರೆಂಚ್ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಖಳನಾಯಕ ಕಿಚ್ಚ ಸುದೀಪ್ ಅವರಿಗೆ ನೊಣವು ಗೋಡೆಯ ಮೇಲೆ ‘ಐ ವಿಲ್ ಬಿ ಬ್ಯಾಕ್’ ಎಂದು ಬರೆದು ಚಾಲೆಂಜ್ ಹಾಕುವ ದೃಶ್ಯಕ್ಕೆ ಅಲ್ಲಿನ ಜನ ಕಿರುಚಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 2012ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ನಾನಿ, ಸಮಂತಾ ಹಾಗೂ ಸುದೀಪ್ ಅದ್ಭುತವಾಗಿ ನಟಿಸಿದ್ದರು.
ರಾಜಮೌಳಿಗೆ ಸಿಕ್ಕ ಅಪರೂಪದ ಗೌರವ
“ಪ್ಯಾರಿಸ್‌ನಲ್ಲಿ ನನ್ನ ಚಿತ್ರಗಳ ಪ್ರದರ್ಶನವಾಗುತ್ತಿರುವುದೇ ಹೆಮ್ಮೆ. ಆದರೆ ಈ ವಿಶೇಷ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ.” – ಎಸ್.ಎಸ್. ರಾಜಮೌಳಿ
ಈ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಪ್ರತಿಷ್ಠಿತ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯ ಹಾಲ್‌ನಲ್ಲಿ ಖಾಯಂ ಸ್ಥಾನ ನೀಡುವ ಮೂಲಕ ಗೌರವಿಸಲಾಗಿದೆ. ಈ ಅಪರೂಪದ ಮನ್ನಣೆಗೆ ರಾಜಮೌಳಿ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಫ್ರೆಂಚ್ ಸಂಸ್ಥೆಗೆ ಧನ್ಯವಾದ ತಿಳಿಸಿ, ಸಂತಸ ಹಂಚಿಕೊಂಡಿದ್ದಾರೆ.



