July 1, 2026
Wednesday, July 1, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ವಾರ್ನಿಂಗ್‌, ಸಂಬಂಧದಲ್ಲಿ ಮೂರನೇ ವ್ಯಕ್ತಿಗೆ ಅವಕಾಶ ಕೊಡಬೇಡಿ

ಮೇಷ
ಕಳೆದ ಕೆಲವು ದಿನಗಳ ವೃತ್ತಿ ಒತ್ತಡ  ಕಡಿಮೆಯಾಗಲಿದೆ. ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಧನಾಗಮ.    
ವೃಷಭ
ಫಲಪ್ರದ ದಿನ. ಕಡಿಮೆ ಶ್ರಮದಲ್ಲಿ ಕಾರ್ಯ ಸಂಪೂರ್ಣ. ಪ್ರೀತಿಪಾತ್ರರ ಕಡೆಗೆ ಹೆಚ್ಚು ಗಮನ ಕೊಡಿ. ತೊಡಕಿನ ಸಾಧ್ಯತೆ ಕಾಣುತ್ತಿದೆ.                    
ಮಿಥುನ
ಅತಿ ಒತ್ತಡದಿಂದ ಬಸವಳಿಯುವಿರಿ. ಮಧ್ಯಾಹ್ನದ ವೇಳೆಗೆ ನಿರಾಳತೆ ಸಿಗಲಿದೆ. ಕೌಟುಂಬಿಕ ಬೆಂಬಲ. ಆರೋಗ್ಯ ಸಮಸ್ಯೆ.            
ಕಟಕ
ನಿರಾಳ ಮನಸ್ಸು. ಹಾಗಾಗಿ ಇನ್ನಿತರ ವಿಷಯಗಳ ಬಗ್ಗೆ ಗಮನ ಹರಿಸಲು ಅವಕಾಶ. ಆರೋಗ್ಯ ಸಮಸ್ಯೆ ನಿವಾರಣೆ. ಧನಲಾಭ.          
ಸಿಂಹ
ಪ್ರೀತಿಗೆ ಹಿರಿಯರ ಸಮ್ಮತಿ ಸಿಗಬಹುದು. ವೃತ್ತಿ ಕಾರ್ಯದಲ್ಲಿ ತೊಡಕು. ಹಿರಿಯರಿಗೆ ಉಸಿರಾಟದ ಸಮಸ್ಯೆ ಕಾಣಿಸಬಹುದು. ಆರ್ಥಿಕ ಉನ್ನತಿ.                
ಕನ್ಯಾ
ಅಪೇಕ್ಷಿಸಿದ ಪ್ರಗತಿ ಕಾಣುವಿರಿ. ಪ್ರಮುಖ ನಿರ್ಧಾರ ಕೃತಿಗಿಳಿಸಲು ಸಕಾಲ. ಹಳೆಯ ಹೂಡಿಕೆ ಧನಲಾಭ ತರಲಿದೆ. ಜ್ವರದ ಸಮಸ್ಯೆ ಕಾಡಬಹುದು.  
ತುಲಾ
ವ್ಯವಹಾರದಲ್ಲಿ ತಪ್ಪಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಬಂಧು ಭೇಟಿ ಸಂತಸ ತರಲಿದೆ. ಭಾವನಾತ್ಮಕ ಏರುಪೇರು.
ವೃಶ್ಚಿಕ
ನಿಮಗಿದು ಪೂರಕ ದಿನವಲ್ಲ. ಹೊಸ ಸವಾಲು ಹುಟ್ಟಿಕೊಳ್ಳಲಿದೆ. ಹಣದ ವಿಚಾರದಲ್ಲಿ ಎಚ್ಚರ ವಹಿಸಿ. ಸಂಬಂಧದಲ್ಲಿ ಏರುಪೇರು ಸಾಧ್ಯತೆ.  
ಧನು
ದಂಪತಿಗೆ ಶುಭಕರ ದಿನ. ಉದ್ಯೋಗ ಅಪೇಕ್ಷಿತರಿಗೆ ಪೂರಕ ದಿನ. ಏಕಾಂಗಿಗಳಿಗೆ ಸಂಗಾತಿ ಲಭ್ಯ. ಹಣಕಾಸು ವ್ಯವಹಾರ ಸುಗಮ.  
ಮಕರ
ಇಂದು ಅದೃಷ್ಟ ನಿಮ್ಮ ಜತೆಗಿಲ್ಲ. ವೃತ್ತಿ ಒತ್ತಡ ಅಽಕ. ಆರ್ಥಿಕ ವ್ಯವಹಾರ ಹಿನ್ನಡೆ ಕಂಡೀತು. ಮನಸ್ಸಿಗೆ ಉದಾಸ ಭಾವ. ಯೋಗ, ಧ್ಯಾನ ಸಹಕಾರಿ.            
ಕುಂಭ
ದಂಪತಿ ಮಧ್ಯೆ ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಹೊಂದಾಣಿಕೆ ಮುಖ್ಯ. ಖರ್ಚು ಅಽಕ ಚಿಂತೆಗೆ ಕಾರಣ. ಆರೋಗ್ಯ ಸ್ಥಿರತೆಯಿಂದ ಸಮಾಧಾನ.                
ಮೀನ
ವ್ಯವಸ್ಥಿತವಾಗಿ ಕೆಲಸ ಮಾಡಿ. ಇಲ್ಲವಾದರೆ ಗೊಂದಲಕ್ಕೆ ಸಿಲುಕುವಿರಿ. ಕೌಟುಂಬಿಕ ವಾಗ್ವಾದ. ಅನಿರೀಕ್ಷಿತ ಖರ್ಚು ಒದಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !