ಹೊಸದಿಗಂತ ವರದಿ ಹಾವೇರಿ (ರಟ್ಟೀಹಳ್ಳಿ):
ಮೊಟ್ಟೆ ಖರೀದಿಸಿ ಚಿಲ್ಲರೆ ವಾಪಾಸ್ ಪಡೆಯುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಅನ್ಯ ಕೋಮಿನ ಯುವಕರು ವ್ಯಾಪಾರಿಯನ್ನು ನೂಕಿ ಕೆಡವಿದ ಪರಿಣಾಮ ವ್ಯಾಪಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಟ್ಟೀಹಳ್ಳಿ ಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಶಿವಾಜಪ್ಪ ಬೈರೋಜಿ (೫೪) ಸ್ಥಳದಲ್ಲೇ ಮೃತಪಟ್ಟ ವ್ಯಾಪಾರಿ.
ರಟ್ಟೀಹಳ್ಳಿಯಲ್ಲಿ ಬುಧವಾರ ರಾತ್ರಿ ಶಿವಾಜಪ್ಪ ಬೈರೋಜಿ ಅವರ ಅಂಗಡಿಯಲ್ಲಿ ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ 100 ರೂ. ನೀಡಿ 5 ಮೊಟ್ಟೆ ಖರಿಸಿದ್ದರು. ಚಿಲ್ಲರೆ ವಾಪಾಸ್ ಚಿಲ್ಲರೆ ಕೇಳುವಾಗ ತಾವು 500 ನೀಡಿದ್ದಾಗಿ ಗದ್ದಲ ನಡೆಸಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಶಿವಾಜಪ್ಪ ಅವರ ಮಗ ಭರತನಿದ್ದು, ಗದ್ದಲ ಬಿಡಿಸಲೆಂದು ಶಿವಾಜಪ್ಪ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ.
ಈ ವೇಳೆ ವಾಸೀಂ ಮತ್ತು ಇತರರು, ಶಿವಾಜಪ್ಪ ಅವರನ್ನು ರಭಸವಾಗಿ ನೂಕಿದ್ದು, ಥಳಿಸಿದ್ದಾರೆ. ಆ ವೇಗಕ್ಕೆ ಕೆಳಗೆ ಬಿದ್ದ ಶಿವಾಜಪ್ಪ ಮೇಲೆಳದೇ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಶಿವಾಜಪ್ಪನ ಮಗ ಭರತ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಕುರಿತು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಐಜಿಪಿ ಡಾ.ರವಿಕಾಂತೇಗೌಡ ಮತ್ತು ಎಸ್ಪಿ ಯಶೋಧಾ ವಂಟಗೋಡಿ ದೌಡಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ ಹಾಕಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.



