ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್, ಶರ್ವರಿ ಹಾಗೂ ಬಾಬಿ ಡಿಯೋಲ್ ಅಭಿನಯದ ಆಲ್ಫಾ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಸ್ಕ್ರೀನ್‌ಗಳು ಸಿಕ್ಕಿವೆ.ಯಶ್ ರಾಜ್ ಫಿಲಂಸ್ ತನ್ನ ಬಲವನ್ನು ಉಪಯೋಗಿಸಿ ಹೆಚ್ಚಿನ ಥಿಯೇಟರ್ ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರಕ್ಕೆ ದಾಖಲೆಯ ಬಿಡುಗಡೆಯನ್ನು ತಂದುಕೊಟ್ಟಿದೆ.
ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ ಒಂದಂಕಿಗೆ ಸೀಮಿತವಾಗಲಿದೆ ಎನ್ನಲಾಗುತ್ತಿದೆ.ಆಲ್ಫಾ ಭಾರತದಾದ್ಯಂತ ಒಟ್ಟು 2,750 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾ ಒಂದಕ್ಕೆ ಈ ಮಟ್ಟದ ದೊಡ್ಡ ಓಪನಿಂಗ್ ಸಿಕ್ಕಿರುವುದು ಇದೇ ಮೊದಲು ಎನ್ನಲಾಗಿದೆ. ಶಿವ ರವೈಲ್ ನಿರ್ದೇಶನದ ಈ ಚಿತ್ರಕ್ಕೆ ದೇಶಾದ್ಯಂತ ಬರೋಬ್ಬರಿ 9,000 ಶೋಗಳು ಸಿಕ್ಕಿವೆ. ಕಳೆದ ಒಂದು ವರ್ಷದಲ್ಲಿ ತೆರೆಕಂಡ ಹಲವು ದೊಡ್ಡ ಸಿನಿಮಾಗಳಿಗಿಂತಲೂ ಇದು ಅತ್ಯುತ್ತಮ ಶೋ ಕೌಂಟ್ ಆಗಿದೆ.

9 ಸಾವಿರ ಶೋಗಳು ಸಿಕ್ಕಿದ್ದರೂ ಮೊದಲ ದಿನದ ಕಲೆಕ್ಷನ್ ಕೇವಲ 7 ಕೋಟಿ ರೂಪಾಯಿ ಆಸುಪಾಸಿನಲ್ಲಿರುವ ಮುನ್ಸೂಚನೆ ಇದೆ. ಈಗಾಗಲೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 35 ಸಾವಿರ ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಈ ಬಾರಿ ಆಲ್ಫಾ ಜೊತೆಗೆ ಕಾಕ್‌ಟೇಲ್ ಟು ಹಾಗೂ ವೆಲ್ಕಮ್ ಟು ಜಂಗಲ್ ಸಿನಿಮಾಗಳು ಕೂಡ ಥಿಯೇಟರ್‌ನಲ್ಲಿದ್ದು, ಆಲ್ಫಾಗೆ ಭಾರೀ ಪೈಪೋಟಿ ನೀಡುತ್ತಿವೆ.



