ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಸಂಬಳಕ್ಕಾಗಿ ಊರು, ರಾಜ್ಯ, ದೇಶವನ್ನೇ ಬಿಟ್ಟು ಹೋಗ್ಬೇಕಾಗತ್ತೆ. ಆದರೆ ಎಲ್ಲರ ಲೈಫ್ ಹೀಗೇ ಇರೋದಿಲ್ಲ. ಸಂಬಳ ಎಷ್ಟು ಕೊಟ್ರೂ ನಾನು ನಮ್ಮೂರು, ನನ್ನ ಕುಟುಂಬವನ್ನು ಬಿಟ್ಟು ಬರೋದಿಲ್ಲ ಅನ್ನೋ ಜನರೂ ಇರ್ತಾರೆ.
ಇದಕ್ಕೆ ಈ ಐಐಟಿ ಪದವೀಧರೆ ಬೆಸ್ಟ್ ಉದಾಹರಣೆ. ಡೇಟಾ ಸೈಂಟಿಸ್ಟ್ ಆಗಿರುವ ಸ್ನೇಹ ಪ್ರಿಯಾಗೆ ಗುರುಗಾವ್‌ನಲ್ಲಿ ಬರೋಬ್ಬರಿ 32 ಲಕ್ಷ ರೂ.ಪ್ಯಾಕೇಜ್ ಕೆಲಸ ಸಿಕ್ಕಿದೆ. ಆದರೆ ಇದನ್ನು ತಿರಸ್ಕರಿಸಿ ಸ್ನೇಹಾ ಬೆಂಗಳೂರಿನಲ್ಲೇ ಇರುವ ನಿರ್ಧಾರ ಮಾಡಿದ್ದಾರೆ.
https://www.instagram.com/reels/DaLiTpLhTLU
ಏಪ್ರಿಲ್‌ನಲ್ಲಿ ಅವರಿಗೆ ವರ್ಷಕ್ಕೆ 32 ಲಕ್ಷ ರೂಪಾಯಿ ಪ್ಯಾಕೇಜ್ ಬರುವ ವೇತನದೊಂದಿಗೆ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ಬಂದಿತು. ಸೇರ್ಪಡೆ ಬೋನಸ್, ಸ್ಥಳಾಂತರ ಭತ್ಯೆ ಸೇರಿದಂತೆ ಎಲ್ಲವೂ ಆಕರ್ಷಕವಾಗಿತ್ತು. ಆದರೆ ಒಂದು ಸಮಸ್ಯೆ ಇತ್ತು, ಆ ಕಂಪನಿ ಗುರ್ಗಾಂವ್‌ನಲ್ಲಿತ್ತು.
ಸಂಬಳ ಅತ್ಯುತ್ತಮವಾಗಿತ್ತು. ಸೇರ್ಪಡೆ ಬೋನಸ್, ಸ್ಥಳಾಂತರ ಭತ್ಯೆ ಎಲ್ಲವೂ ಇತ್ತು. ಅದು ಎಲ್ಲ ರೀತಿಯಲ್ಲೂ ಅತ್ಯುತ್ತಮ ಉದ್ಯೋಗವಾಗಿತ್ತು, ಆದರೂ, ಅವರು ಆ ಅವಕಾಶವನ್ನು ತಿರಸ್ಕರಿಸಿದೆ ಎಂದು ಸ್ನೇಹಾ ಹೇಳಿಕೊಂಡಿದ್ದಾರೆ.
ನನ್ನ ಅಣ್ಣ ಅತ್ತಿಗೆ ಬೆಂಗಳೂರಿನಲ್ಲಿದ್ದಾರೆ. ನನ್ನ ಕಾಲೇಜು ಸ್ನೇಹಿತೆಯರು ಇಲ್ಲೇ ಇದ್ದಾರೆ. ಸ್ವಲ್ಪ ಸಂಬಳ ಕಡಿಮೆಯಾದ್ರೂ ಪರವಾಗಿಲ್ಲ. ನಾನು ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡು ಹಾಯಾಗಿ ಇರ್ತೀನಿ ಎಂದು ಹೇಳಿಕೊಂಡಿದ್ದಾರೆ.



